ADVERTISEMENT

ಸತ್ಯಂ: ತೀರ್ಪು ದಿನ ಇಂದು ಪ್ರಕಟ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2014, 19:30 IST
Last Updated 22 ಜೂನ್ 2014, 19:30 IST

ಹೈದರಾಬಾದ್‌ (ಪಿಟಿಐ): ಬಹುಕೋಟಿ ಸತ್ಯಂ ವಂಚನೆ ಹಗರಣದ  ತೀರ್ಪು ಪ್ರಕಟವಾಗುವ ದಿನವನ್ನು ಸೋಮವಾರ ನಿಗದಿ ಪಡಿಸುವ ಸಾಧ್ಯತೆ ಇದೆ.   ಹಗರಣದ ವಿಚಾರಣೆಗಾಗಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯ, ಸುಮಾರು ಐದೂವರೆ ವರ್ಷದ ನಂತರ ತೀರ್ಪು ಪ್ರಕಟಿಸುವ ದಿನವನ್ನು ಅಂತಿಮ ಗೊಳಿಸಲಿದೆ.

ಸತ್ಯಂ ಪ್ರಕರಣದ ವಿಚಾರಣೆ ಕಳೆದ ವಾರವೇ ಅಂತಿಮಗೊಂಡಿದೆ. ವಿಶೇಷ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌್ ಈಗಾಗಲೇ 216 ಸಾಕ್ಷಿಗಳಿಂದ ಹೇಳಿಕೆ ಪಡೆದಿದ್ದು 3,038 ದಾಖಲೆಗಳನ್ನು ಗುರುತಿಸಿದ್ದಾರೆ.

ವಿಶೇಷ ನ್ಯಾಯಮೂರ್ತಿ ಬಿ.ವಿ.ಎಲ್‌.ಎನ್‌.ಚಕ್ರವರ್ತಿ ತೀರ್ಪು ದಿನವನ್ನು ಪ್ರಕಟಿಸಲಿದ್ದಾರೆ. ಸತ್ಯಂ ಹಗರಣದ ಪ್ರಮುಖ ಆರೋಪಿ ಹಾಗೂ ಸತ್ಯಂ ಕಂಪ್ಯೂಟರ್ಸ್‌ನ ಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಬಿ.ರಾಮಲಿಂಗಾ ರಾಜು ಅವರನ್ನು ಸಿಐಡಿ ಪೊಲೀಸರು 2009 ರ ಜನವರಿ 9 ರಂದು ಬಂಧಿ ಸಿದ್ದರು. ಸದ್ಯ ರಾಜು ಅವರ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.