ADVERTISEMENT

ಸದನದಲ್ಲಿ ಪೋಲವರಂ ಗದ್ದಲ

​ಪ್ರಜಾವಾಣಿ ವಾರ್ತೆ
Published 9 ಜೂನ್ 2014, 19:30 IST
Last Updated 9 ಜೂನ್ 2014, 19:30 IST

ನವದೆಹಲಿ (ಪಿಟಿಐ):  ಅವಿಭಜಿತ ಆಂಧ್ರ ಪ್ರದೇಶದ ಪೋಲವರಂ ನೀರಾ­ವರಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀ­ವಾಜ್ಞೆಯನ್ನು ವಿರೋಧಿಸಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌) ಸಂಸದರು ಸೋಮವಾರ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದರು.

ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಸಂತೋಷ್‌ ಗಂಗ್ವಾರ್‌ ಆಂಧ್ರ ಪ್ರದೇಶ ಪುನರ್ವಿಂಗಡಣಾ ತಿದ್ದುಪಡಿ ಸುಗ್ರೀವಾಜ್ಞೆ (2014) ಮಂಡಿಸಿದರು.
ಇದನ್ನು ವಿರೋಧಿಸಿ ಬಿಜೆಡಿ ಹಾಗೂ ಟಿಆರ್‌ಎಸ್‌ ಸಂಸದರು ಘೋಷಣೆ ಕೂಗುತ್ತ ಸಭಾಧ್ಯಕ್ಷರ ಪೀಠದತ್ತ ನುಗ್ಗಿದರು.

ಪ್ರತಿಭಟನಾನಿರತ ಸಂಸದರು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರ ಮನವಿಗೆ ಕಿವಿಗೊಡದ ಹಿನ್ನೆಲೆಯಲ್ಲಿ ಕಲಾಪವನ್ನು ಮಂಗಳವಾರಕ್ಕೆ  ಮುಂದೂಡ­ಲಾಯಿತು. 16ನೇ ಲೋಕಸಭೆಯ ಕಲಾಪ  ಆರಂಭವಾದ ಮೇಲೆ ನಡೆದ ಮೊದಲನೇ ಪ್ರತಿಭಟನೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.