ADVERTISEMENT

ಸರ್ವಪಕ್ಷ ಸಭೆಗೆ ಕಾಂಗ್ರೆಸ್ ಬಹಿಷ್ಕಾರ ಸಾಧ್ಯತೆ

ಸರ್ವಸಮ್ಮತ ಸೂತ್ರ ಮಂಡನೆ ನಿರೀಕ್ಷೆಯಲ್ಲಿ ವಿರೋಧ ಪಕ್ಷ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 18:51 IST
Last Updated 1 ಆಗಸ್ಟ್ 2015, 18:51 IST

ನವದೆಹಲಿ(ಐಎಎನ್ ಎಸ್): ಸುಗಮ ಕಲಾಪಕ್ಕೆ ಸಹಕರಿಸಲು ಮನವಿ ಮಾಡುವ ಉದ್ದೇಶದಿಂದ ಕರೆಯಲಾಗಿರುವ ಸರ್ವಪಕ್ಷಗಳ ಸಭೆಯಲ್ಲಿ ಸರ್ಕಾರ ಸರ್ವಸಮ್ಮತ ಸೂತ್ರವನ್ನು ಮಂಡಿಸದೇ ಇದ್ದಲ್ಲಿ ಸಭೆಯನ್ನು ಬಹಿಷ್ಕರಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಸರ್ಕಾರ ಸರ್ವಪಕ್ಷಸಭೆಯನ್ನು ಸೋಮವಾರ ಕರೆದಿದ್ದು, ಸಭೆಯಲ್ಲಿ ಸರ್ವಸಮ್ಮತವಾದ ಸೂತ್ರವನ್ನು ಸರ್ಕಾರ ಮಂಡಿಸದೇ ಹೋದಲ್ಲಿ ಕಾಂಗ್ರೆಸ್ ಸಭೆಯನ್ನು ಬಹಿಷ್ಕರಿಸಲಿದೆ. ಸಭೆಗೆ ಭಾಗವಹಿಸಲು ನಮ್ಮ ವಿರೋಧವೇನೂ ಇಲ್ಲ. ಆದರೆ, ಸಭೆ ಫಲಪ್ರದವಾದ ಅಂಶಗಳಿಂದ ಕೂಡಿರಬೇಕು ಎಂದು ಪಕ್ಷದ ಹಿರಿಯ ಮುಖಂಡ ಆನಂದ್ ಶರ್ಮ ಶನಿವಾರ ಹೇಳಿದ್ದಾರೆ.

ಸೋಮವಾರ ಸರ್ವಪಕ್ಷ ಸಭೆಗೂ ಮುನ್ನ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಸಂಸದೀಯ ಸಭೆ ಕರೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.