ADVERTISEMENT

ಸಿಪಿಐ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 9:06 IST
Last Updated 19 ಏಪ್ರಿಲ್ 2015, 9:06 IST
ಸಿಪಿಐ ಕಾರ್ಯದರ್ಶಿ ಸೀತಾರಾಂ ಯೆಚೂರಿ -ಪಿಟಿಐ ಚಿತ್ರ
ಸಿಪಿಐ ಕಾರ್ಯದರ್ಶಿ ಸೀತಾರಾಂ ಯೆಚೂರಿ -ಪಿಟಿಐ ಚಿತ್ರ   

ವಿಶಾಖಪಟ್ಟಣ(ಐಎಎನ್ ಎಸ್/ಪಿಟಿಐ): ಸಿಪಿಐ(ಎಂ)ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಭಾನುವಾರ ಆಯ್ಕೆಯಾಗಿದ್ದಾರೆ.

ಈ ಮೊದಲು ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದ ಸೀತಾರಾಂ ಅವರನ್ನು ಇಲ್ಲಿ ನಡೆದ ಪಕ್ಷದ 21ನೇ ರಾಷ್ಟ್ರೀಯ ಸಮಾವೇಶದಲ್ಲಿ ಈ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಶನಿವಾರ ರಾತ್ರಿ ಪಾಲಿಟ್ ಬ್ಯೂರೋ ಕೇಂದ್ರ ಸಮಿತಿ ಸಭೆಯಲ್ಲಿ ಸೀತಾರಾಂ ಯೆಚೂರಿ ಹಾಗೂ ರಾಮಚಂದ್ರನ್ ಪಿಳೈ ಅವರ ಹೆಸರು ಕೇಳಿ ಬಂದಿದ್ದವು. ಈ ಇಬ್ಬರ ಬಗ್ಗೆಯೂ ಸರ್ವಾನುಮತ ಅಭಿಪ್ರಾಯ ವ್ಯಕ್ತವಾಗಿತ್ತು ಎನ್ನಲಾಗಿದೆ.

ಮೋದಿ ಆಳ್ವಿಕೆಯಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯ ದಮನವಾಗುತ್ತಿದ್ದು, ಬಂಡವಾಳ ಶಾಹಿಗಳು ಆಳವಾಗಿ ಬೇರೂರುತ್ತಿದ್ದಾರೆ ಎಂದು ಆರೋಪಿಸಿರುವ ನೂತನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಪಕ್ಷ ಸಂಘಟನೆ ನಮ್ಮ ಮುಂದಿರುವ ಸವಾಲಿನ ಕೆಲಸ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.