ನವದೆಹಲಿ (ಪಿಟಿಐ): ಜೆಟ್ ಇಂಧನ ಬೆಲೆಯನ್ನು ಶೇ 1.8ರಷ್ಟು ಹಾಗೂ ಸಬ್ಸಿಡಿಯೇತರ ಪ್ರತಿ ಎಲ್ಪಿಜಿ ಸಿಲಿಂಡರ್್ ದರವನ್ನು ₨ 23.50 ಕಡಿತ ಮಾಡಲಾಗಿದೆ.
ದೆಹಲಿಯಲ್ಲಿ ಸಬ್ಸಿಡಿಯೇತರ 14.2 ಕೆ.ಜಿ ಅಡುಗೆ ಅನಿಲ ಸಿಲಿಂಡಂರ್ ಬೆಲೆ ಇನ್ನು ಮುಂದೆ ₨ 905. ಈ ಮೊದಲು ₨ 928.50 ಇತ್ತು. ಜೆಟ್ ಇಂಧನ ಬೆಲೆಯನ್ನು ದೆಹಲಿಯಲ್ಲಿ ಪ್ರತಿ ಸಾವಿರ ಲೀಟರ್ಗೆ ₨ 1,285.89 ಇಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.