ADVERTISEMENT

ಸುಭಾಷ್‌ಚಂದ್ರ ಬೋಸ್ ಬಗೆಗಿನ ಆರ್‌ಟಿಐ ಅರ್ಜಿಗಳಿಗೆ ಉತ್ತರಿಸದಿರಲು ಕೇಂದ್ರ ನಿರ್ಧಾರ

ಏಜೆನ್ಸೀಸ್
Published 22 ಜೂನ್ 2017, 5:53 IST
Last Updated 22 ಜೂನ್ 2017, 5:53 IST
ಸುಭಾಷ್‌ಚಂದ್ರ ಬೋಸ್
ಸುಭಾಷ್‌ಚಂದ್ರ ಬೋಸ್   

ನವದೆಹಲಿ: ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಬಗ್ಗೆ ಮಾಹಿತಿ ಕೋರಿ ಸಲ್ಲಿಸುವ ಯಾವುದೇ ಅರ್ಜಿಗಳಿಗೆ ಉತ್ತರಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ನೇತಾಜಿ ಅವರ ಬಗ್ಗೆ ಮಾಹಿತಿ ಬೇಕೆನ್ನುವವರು netajipapers.gov.in ವೆಬ್‌ಸೈಟ್‌ನಿಂದ ತಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದು. 2015ರಿಂದ ಈ ವೆಬ್‌ಸೈಟ್‌ ಸಾರ್ವಜನಿಕರಿಗೆ ಮುಕ್ತವಾಗಿದ್ದು ನೇತಾಜಿ ಅವರ ಬಗೆಗಿನ ಎಲ್ಲಾ ದಾಖಲೆಗಳೂ ವೆಬ್‌ಸೈಟ್‌ನಲ್ಲಿ ಲಭ್ಯವಿವೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

‘ನೇತಾಜಿ ಅವರ ಬಗೆಗಿನ ಎಲ್ಲಾ ದಾಖಲೆಗಳನ್ನೂ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿದೆ. ನೇತಾಜಿ ಬಗ್ಗೆ ಮಾಹಿತಿ ಬೇಕೆನ್ನುವವರು ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೀಗಾಗಿ ನೇತಾಜಿ ಬಗ್ಗೆ ಮಾಹಿತಿ ಕೋರಿ ಬರುವ ಆರ್‌ಟಿಐ ಅರ್ಜಿಗಳಿಗೆ ಉತ್ತರಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಮಾಹಿತಿ ಕೋರಿ ಅರ್ಜಿ ಸಲ್ಲಿಸಲು ಬರುವವರಿಗೆ ವೆಬ್‌ಸೈಟ್‌ನಿಂದ ಮಾಹಿತಿ ಪಡೆಯುವಂತೆ ತಿಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.