ADVERTISEMENT

ಸೋಮನಾಥ್ ಭಾರ್ತಿ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ನವದೆಹಲಿ (ಪಿಟಿಐ):ಸೋಮನಾಥ್ ಭಾರ್ತಿ ದೆಹಲಿಯ ಕಾನೂನು ಸಚಿವರಾಗಿದ್ದಾಗ, ಅವರ ನೇತೃತ್ವದಲ್ಲಿ ನಡೆದಿದ್ದ ತಡರಾತ್ರಿಯ ದಾಳಿಯಲ್ಲಿ ಉಗಾಂಡ ಮಹಿಳೆಯರ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶನಿವಾರ ನ್ಯಾಯಾಲಯದಲ್ಲಿ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಮಹಿಳೆಯರ ಮೇಲೆ ಹಲ್ಲೆ ನಡೆಸಿ ಗೌರವಕ್ಕೆ ಧಕ್ಕೆ ತಂದ, ಉದ್ದೇಶಪೂರ್ವಕ ವಾಗಿ ಹಲ್ಲೆ ನಡೆಸಿದ, ಅಪರಾಧಕ್ಕೆ ಸಂಚು ರೂಪಿಸಿದ ಹಾಗೂ ಗಲಭೆ ನಡೆಸಿದ ಆರೋಪಗಳನ್ನು ಸೋಮನಾಥ್ ಭಾರ್ತಿ ವಿರುದ್ಧ ಹೊರಿಸಲಾಗಿದೆ. ಈ ಸಂಬಂಧ ನ್ಯಾಯಾಲಯವು ವಿಚಾರಣೆಯನ್ನು ಅಕ್ಟೋಬರ್‌ 30ಕ್ಕೆ ನಿಗದಿಪಡಿಸಿದೆ.

ಹೊಸ ದೂರು: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಭಾರ್ತಿ ವಿರುದ್ಧ ಹೊಸ ದೂರು ದಾಖಲಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ಸರ್ಕಾರಿ ಅಧಿಕಾರಿಗಳಿಗೆ ಸೋಮನಾಥ್ ಭಾರ್ತಿ ಅಡಚಣೆ ಉಂಟು ಮಾಡಿದರು ಎಂದು ಪೊಲೀಸರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಆಗ್ರಾಗೆ ಸೋಮನಾಥ್ ಭಾರ್ತಿ: ವಂಚನೆ ಪ್ರಕರಣವೊಂದರ ತನಿಖೆಗೆ ಸಂಬಂಧಿಸಿದಂತೆ ಎಎಪಿ ಶಾಸಕ ಸೋಮನಾಥ್ ಭಾರ್ತಿ ಅವರನ್ನು ಪೊಲೀಸರು ಶನಿವಾರ ಆಗ್ರಾ ಮತ್ತು ಮಥುರಾ ಜಿಲ್ಲೆಗಳಿಗೆ ಕರೆದೊಯ್ದಿದ್ದಾರೆ.

ಸೋಮನಾಥ್ ಭಾರ್ತಿ ತಮ್ಮ ಕಾರು ಪಡೆದು, ಮತ್ತೆ ಅದನ್ನು ಹಿಂತಿರುಗಿಸಿಲ್ಲ ಎಂದು ಆಗ್ರಾದ ಲಾಲ್ ಸಿಂಗ್ ಎಂಬುವವರು ಈ ಹಿಂದೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.