ADVERTISEMENT

ಸೌಹಾರ್ದತಾ ರ‍್ಯಾಲಿಯಲ್ಲಿ ಭಾಗವಹಿಸುವೆ; ಅಲ್ಲಿಗೆ ಹೋಗಿ ಬಂದ ನಂತರವೇ ಪ್ರತಿಭಟನೆಗಳಿಗೆ ಉತ್ತರಿಸುವೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2017, 11:51 IST
Last Updated 24 ಫೆಬ್ರುವರಿ 2017, 11:51 IST
ಸೌಹಾರ್ದತಾ ರ‍್ಯಾಲಿಯಲ್ಲಿ ಭಾಗವಹಿಸುವೆ; ಅಲ್ಲಿಗೆ ಹೋಗಿ ಬಂದ ನಂತರವೇ ಪ್ರತಿಭಟನೆಗಳಿಗೆ ಉತ್ತರಿಸುವೆ
ಸೌಹಾರ್ದತಾ ರ‍್ಯಾಲಿಯಲ್ಲಿ ಭಾಗವಹಿಸುವೆ; ಅಲ್ಲಿಗೆ ಹೋಗಿ ಬಂದ ನಂತರವೇ ಪ್ರತಿಭಟನೆಗಳಿಗೆ ಉತ್ತರಿಸುವೆ   

ಕೋಝಿಕ್ಕೋಡ್: ನಾಳೆ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುವ ಸೌಹಾರ್ದತಾ ರ‍್ಯಾಲಿಯಲ್ಲಿ ಖಂಡಿತಾ ಭಾಗವಹಿಸುತ್ತೇನೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಇಂದು ಸುದ್ದಿಗಾರರೊಡನೆ ಮಾತನಾಡಿದ ಅವರು ಅಲ್ಲಿಗೆ ಹೋಗಿ ಬಂದ ನಂತರ ಆರ್‍‌ಎಸ್‍ಎಸ್‍ನ ಪ್ರತಿಭಟನೆಗೆ ಉತ್ತರ ನೀಡುತ್ತೇನೆ ಎಂದಿದ್ದಾರೆ.

ಮಂಗಳೂರಿನಲ್ಲಿ ಪಿಣರಾಯಿ ವಿಜಯನ್ ಭೇಟಿ ವಿರುದ್ಧ ಪ್ರತಿಭಟನೆಗಳು ತೀವ್ರವಾಗಿದ್ದು, ಕೇರಳದ ಮುಖ್ಯಮಂತ್ರಿಯ ಸುರಕ್ಷೆಗಾಗಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ.

ADVERTISEMENT

ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು 400 ಪೊಲೀಸರನ್ನು ನಿಯೋಜಿಸಲಾಗಿದೆ.

[related]

ಹಿಂದೂ ವಿರೋಧಿ ಪಿಣರಾಯಿ ಗೋ ಬ್ಯಾಕ್ : ಪಿಣರಾಯಿ ಭಾಷಣ ಮಾಡುವುದನ್ನು ಪ್ರತಿಭಟಿಸಿ ಇಂದು ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಿಂದೂ ವಿರೋಧಿ ಪಿಣರಾಯಿ ಗೋ ಬ್ಯಾಕ್ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.