ADVERTISEMENT

ಸ್ಕ್ರಾಮ್‌ಜೆಟ್‌ ಎಂಜಿನ್ ಪರೀಕ್ಷೆ

ಇಸ್ರೊ ಮತ್ತೊಂದು ಮೈಲಿಗಲ್ಲು

ಪಿಟಿಐ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ಉಡಾವಣೆಗೊಂಡ ಸ್ಕ್ರಾಮ್‌ಜೆಟ್‌ ರಾಕೆಟ್‌
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ಉಡಾವಣೆಗೊಂಡ ಸ್ಕ್ರಾಮ್‌ಜೆಟ್‌ ರಾಕೆಟ್‌   

ಬೆಂಗಳೂರು (ಪಿಟಿಐ): ವಾತಾವರಣದಲ್ಲಿರುವ ಆಮ್ಲಜನಕವನ್ನು  ಹೀರಿಕೊಂಡು ಇಂಧನ ದಹಿಸುವ  ಸ್ಕ್ರಾಮ್‌ಜೆಟ್‌ ರಾಕೆಟ್‌ ಎಂಜಿನ್‌ನ ಪರೀಕ್ಷಾರ್ಥ ಉಡಾವಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಭಾನುವಾರ ಯಶಸ್ವಿಯಾಗಿ ನಡೆಸಿದೆ.

ಈ ಎಂಜಿನ್‌ ಅನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಈ ಎಂಜಿನ್‌ ಬಳಸಿದ ಅಮೆರಿಕ, ರಷ್ಯಾ ಮತ್ತು ಯೂರೋಪ್‌ ಬಾಹ್ಯಾಕಾಶ ಸಂಸ್ಥೆಗಳ ಸಾಲಿಗೆ ಭಾರತವೂ ಸೇರಿದೆ.

ಸ್ಕ್ರಾಮ್‌ಜೆಟ್‌ ಎಂಜಿನ್ ಇರುವ ರಾಕೆಟ್‌ಗಳು ಆಮ್ಲಜನಕವನ್ನು ಹೊತ್ತೊಯ್ಯುವುದಿಲ್ಲ. ಬದಲಿಗೆ ವಾತಾವರಣದಲ್ಲಿರುವ ಆಮ್ಲಜನಕವನ್ನೇ ಹೀರಿಕೊಳ್ಳುತ್ತವೆ. ಹೀಗಾಗಿ ಇಂತಹ ರಾಕೆಟ್‌ಗಳ ಒಟ್ಟು ತೂಕ ಕಡಿಮೆ ಇರುತ್ತದೆ. ತೂಕ ಕಡಿಮೆ ಆಗುವುದರಿಂದ, ಬಳಕೆಯಾಗುವ ಇಂಧನದ ಪ್ರಮಾಣ ಕಡಿಮೆಯಾಗಿ ವೆಚ್ಚದಲ್ಲೂ ಇಳಿಕೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.