ADVERTISEMENT

ಸ್ಯಾಮ್ಸಂಗ್‌ ಅಧ್ಯಕ್ಷರಿಂದ ವಂಚನೆ

ಕೋರ್ಟ್‌ಗೆ ಹಾಜರಾಗಲು ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ವಂಚನೆ ಪ್ರಕರಣದಲ್ಲಿ ಬಂಧನ ವಾರಂಟ್‌ ಎದುರಿಸುತ್ತಿರುವ ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌ ಅಧ್ಯಕ್ಷ ಲೀ ಕುನೀ ಅವರು ಗಾಜಿಯಾಬಾದ್‌ ಕೋರ್ಟ್‌ ಮುಂದೆ ಹಾಜರಾಗುವಂತೆ ಸುಪ್ರೀಂಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.

‘ಕುನೀ ವಿರುದ್ಧ  ಹೊರಡಿಸಲಾಗಿರುವ ಬಂಧನ ವಾರಂಟ್‌್  ಆರು ವಾರಗಳ ಕಾಲ  ಜಾರಿಗೆ ಬರುವುದಿಲ್ಲ. ಈ ಅವಧಿಯಲ್ಲಿ ಕುನೀ, ಪ್ರಕರಣದ ವಿಚಾರಣೆ ಹಾಗೂ ಜಾಮೀನು ಪಡೆಯುವುದಕ್ಕೆ ಅಥವಾ ಖುದ್ದು ಹಾಜರಾತಿಗೆ ವಿನಾಯ್ತಿ ಪಡೆಯುವುದಕ್ಕೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕು’  ಎಂದು ನ್ಯಾಯಮೂರ್ತಿಗಳಾದ ಸಿ.ಕೆ.ಪ್ರಸಾದ್‌ ಹಾಗೂ ಪಿ.ಸಿ.ಘೋಷ್‌್ ಅವರಿದ್ದ ಪೀಠ ಹೇಳಿದೆ.

ಬಂಧನ ವಾರಂಟ್‌್ ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ವಜಾಮಾಡಿ ದ್ದ ಅಲಹಾಬಾದ್‌್ ಹೈಕೋರ್ಟ್‌್ ಆದೇಶ ಪ್ರಶ್ನಿಸಿ ಕುನೀ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಕುನೀ ಅವರು ₨ 8 ಕೋಟಿ 68 ಲಕ್ಷ (14,00000 ಡಾಲರ್‌) ವಂಚನೆ ಮಾಡಿದ್ದಾರೆ  ಎಂದು ಆರೋಪಿಸಿ ಜೆಸಿಇ ಕನ್ಸಲ್ಟನ್ಸಿ ಕಂಪೆನಿಯು  ಗಾಜಿಯಾಬಾದ್‌್ ಕೋರ್ಟ್‌ನಲ್ಲಿ ಖಟ್ಲೆ ಹೂಡಿತ್ತು.

ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌್ ರದ್ದುಪಡಿಸಬೇಕೆಂದು ಕೋರಿ ಕುನೀ ಈ ಮೊದಲು ಹೈಕೋರ್ಟ್‌್ ಹಾಗೂ ಸುಪ್ರೀಂಕೋರ್ಟ್‌್ ಮೊರೆ ಹೋಗಿದ್ದರು.   ಆದರೆ ಈ ಎರಡೂ ಕೋರ್ಟ್‌ಗಳು ಮನವಿಯನ್ನು ತಿರಸ್ಕರಿಸಿದ್ದವು. ಕೋರ್ಟ್‌ಗೆ ಹಾಜರಾಗಲಿಲ್ಲ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯವು ಕುನೀ ವಿರುದ್ಧ ಬಂಧನ ವಾರಂಟ್‌್ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.