ADVERTISEMENT

ಸ್ಯಾಮ್‌ ಮಾಣೆಕ್‌ ಷಾ ಜನ್ಮಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST

ನವದೆಹಲಿ: ಫೀಲ್ಡ್‌ ಮಾರ್ಷಲ್‌ ಸ್ಯಾಮ್‌ ಮಾಣೆಕ್‌ ಷಾ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜನರಲ್‌್ ವಿಕ್ರಂ ಸಿಂಗ್‌ ಅವರು ಮಾಣೆಕ್‌ ಷಾ ಪುತ್ಥಳಿಯನ್ನು ದೆಹಲಿ ಕಂಟೊನ್ಮೆಂಟ್‌ನ ಮಾಣೆಕ್‌ ಷಾ ಕೇಂದ್ರದಲ್ಲಿ ಗುರುವಾರ ಅನಾವರಣ ಮಾಡಲಿದ್ದಾರೆ.

2008ರಲ್ಲಿ ಮಾಣೆಕ್‌ ಮೃತಪಟ್ಟಾಗ ಅಂದಿನ ಸೇನಾ ಮುಖ್ಯಸ್ಥ ಜನರಲ್‌ ದೀಪಕ್‌್ ಕಪೂರ್‌್ ಅವರು  ಮಾಣೆಕ್‌್ ಕುಟುಂಬಕ್ಕೆ ಸಂತಾಪ ಸೂಚಕ ಸಂದೇಶ ಕಳಿಸದೆ ದೊಡ್ಡ ವಿವಾದಕ್ಕೆ ಕಾರಣರಾಗಿದ್ದರು. ಆ ಸಂದರ್ಭದಲ್ಲಿ ಅವರು ರಷ್ಯಾದಲ್ಲಿದ್ದರು.

ಮಾಣೆಕ್‌್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೇನೆ ಉಪಮುಖ್ಯಸ್ಥ ಲೆ.ಜನರಲ್‌್ ಎಂ.ಎಲ್‌್.ನಾಯ್ಡು ಅವರಿಗೆ  ಸೂಚಿಸಿದ್ದರು. ರಕ್ಷಣಾ ಸಚಿವ ಎ.ಕೆ.ಆಂಟನಿ, ಪ್ರಧಾನಿ ಮನಮೋಹನ್‌ಸಿಂಗ್‌, ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌್ ಕೂಡ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ.  ಆಗ ರಕ್ಷಣಾ ಖಾತೆ ರಾಜ್ಯ ಸಚಿವರಾಗಿದ್ದ ಎಂ.ಎಂ.ಪಲ್ಲಂ ರಾಜು ಸರ್ಕಾರದ ಪರವಾಗಿ ಮಾಣೆಕ್‌್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

‘ಮಾಣೆಕ್‌್ ಅಂತ್ಯಕ್ರಿಯೆಯಲ್ಲಿ ಭಾಗವಹಿಸದ ಕಾರಣ ಆಂಟನಿ ಹಾಗೂ ಕಪೂರ್‌್ ತೀವ್ರ ಟೀಕೆಗೆ ಒಳಗಾಗಬೇಕಾಯಿತು. ಸೌತ್‌್ ಬ್ಲಾಕ್‌್ ಹೊರಗಿರುವ ಸೇನಾ ಧ್ವಜ ಕೂಡ ಅರ್ಧ ಮಟ್ಟದಲ್ಲಿ ಹಾರಾಡಲಿಲ್ಲ’ ಎಂದು ಅಧಿಕಾರಿಯೊಬ್ಬರು ನೆನಪಿಸಿಕೊಳ್ಳುತ್ತಾರೆ.

1914ರ ಏಪ್ರಿಲ್‌್ 3ರಂದು ಅಮೃತಸರದಲ್ಲಿ ಜನಿಸಿದ ಮಾಣೆಕ್‌್ ಷಾ, ಫೀಲ್ಡ್‌್ ಮಾರ್ಷಲ್‌್ ಗೌರವ ಪಡೆದ
ಭಾರತದ ಮೊದಲ ಸೇನಾಧಿಕಾರಿ. 2008ರ ಜೂನ್‌್ 27ರಂದು ತಮ್ಮ 94ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದರು.
1971ರಲ್ಲಿ ಪಾಕ್‌ ಜತೆಗಿನ ಯುದ್ಧದಲ್ಲಿ ಭಾರತಕ್ಕೆ ಗೆಲುವು ಸಿಕ್ಕಿದ್ದರ ಹಿಂದೆ ಮಾಣೆಕ್‌್ ಪರಿಶ್ರಮ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT