ADVERTISEMENT

ಹಸ್ತಕ್ಷೇಪ ಸಲ್ಲ: ಲೋಧಾ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2014, 19:30 IST
Last Updated 13 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ನ್ಯಾಯಾಂಗದ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಯಾವುದೇ ಪ್ರಯತ್ನ ಫಲ ನೀಡದು. ಈ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯಾವುದೇ ಹಸ್ತಕ್ಷೇಪದ ಯತ್ನವನ್ನು ಹಿಮ್ಮೆಟ್ಟಿಸುವ ಅಂತರ್ಗತ ಶಕ್ತಿ ನ್ಯಾಯಾಂಗಕ್ಕೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಆರ್‌.ಎಂ.ಲೋಧಾ ಒತ್ತಿ ಹೇಳಿದರು.

ನ್ಯಾಯಮೂರ್ತಿಗಳ ಸಮಿತಿಯೇ ನ್ಯಾಯಮೂರ್ತಿಗಳ ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಗೆ ತೆರೆ ಎಳೆಯುವ ಉದ್ದೇಶದಿಂದ ಸಂಸತ್ತು ಹೊಸ ಮಸೂದೆಗೆ ಅನುಮೋದನೆ ನೀಡಿರುವುದರಿಂದ ಅವರು ಹೀಗೆ ಹೇಳಿದ್ದಾರೆ ಎನ್ನು­ವುದು ಸ್ಪಷ್ಟ.

ಕಾರ್ಯಾಂಗ­ವಾಗಲೀ ಅಥವಾ ಬೇರೆ ಯಾರೇ ತಪ್ಪೆಸಗಿ­ದಾಗ ನ್ಯಾಯಾಂಗ ತಮ್ಮ ನೆರವಿಗೆ ಬರುತ್ತದೆ ಎಂದು ಜನ ನಂಬಿದ್ದಾರೆ. ಜನತೆ ನ್ಯಾಯಾಂಗದ ಮೇಲೆ ಇರಿಸಿರುವ ಈ ವಿಶ್ವಾಸವನ್ನು ಕಾಯ್ದುಕೊಳ್ಳ­ಬೇಕಾದರೆ ನ್ಯಾಯಾಂಗಕ್ಕೆ ಸ್ವಾತಂತ್ರ್ಯ ಅತ್ಯಂತ ಅಗತ್ಯ ಎಂದು ವಿಚಾರ ಸಂಕಿರಣದಲ್ಲಿ ಶನಿವಾರ ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.