ADVERTISEMENT

ಹಿಂದೂಗಳೂ ಗೋಮಾಂಸ ತಿನ್ನುತ್ತಾರೆ: ಲಾಲು ಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ಪಟ್ನಾ (ಪಿಟಿಐ): ಇಕ್ಲಾಖ್ ಹತ್ಯೆ ಕುರಿತು ಪ್ರತಿಕ್ರಿಯಿಸಿರುವ ಆರ್‌ಜೆಡಿ ಮುಖಂಡ ಲಾಲು ಪ್ರಸಾದ್, ಹಿಂದೂಗಳು ಗೋಮಾಂಸ ತಿನ್ನುತ್ತಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಗೋಹತ್ಯೆಯನ್ನು ಕೋಮುವಾದ ಹುಟ್ಟುಹಾಕಲು ಬಳಸಿಕೊಳ್ಳುತ್ತಿವೆ  ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

‘ಆಕಳು ಮತ್ತು ಆಡಿನ ಮಾಂಸದ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಮಾಂಸ ತಿನ್ನುವವರೆಲ್ಲಾ ಒಂದೆ. ಮಾಂಸ ತಿನ್ನುವವರು ಅನಾಗರಿಕರು. ಬಡವರು ತಮ್ಮ ಹಸಿವನ್ನು ಇಂಗಿಸಿಕೊಳ್ಳಲು ಮಾತ್ರ ಮಾಂಸ ತಿನ್ನುತ್ತಾರೆ. ಆದರೂ ಮಾಂಸ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂದೂ ಲಾಲು ಹೇಳಿದ್ದಾರೆ.


ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ‘ಲಾಲು ಪ್ರಸಾದ್‌ಗೆ ತಲೆ ಕೆಟ್ಟಿದೆ. ಹಿಂದೂಗಳು ಗೋವಿನ ರಕ್ಷಣೆಗೆ ನಿಲ್ಲುತ್ತಾರೆಯೇ ಹೊರತು, ತಿನ್ನುವುದಿಲ್ಲ. ಈ ಹೇಳಿಕೆ ಹಿಂಪಡೆಯದಿದ್ದರೆ ಲಾಲು ಮನೆ ಮುಂದೆ ಧರಣಿ ನಡೆಸುತ್ತೇನೆ’ ಎಂದು ಕಿಡಿಕಾರಿದ್ದಾರೆ.

ಕಾಟ್ಜು  ಹೇಳಿಕೆ: ಗೋಮಾಂಸ ಸೇವನೆ  ವದಂತಿಯಿಂದ ವಿವಾದ  ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್‌  ನಿವೃತ್ತ ನ್ಯಾಯ ಮೂರ್ತಿ ಮಾರ್ಕಂಡೇಯ ಕಾಟ್ಜು, ಹಸು ಕೇವಲ ಒಂದು ಪ್ರಾಣಿ, ಅದು ಯಾರ ತಾಯಿಯೂ ಅಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT