ADVERTISEMENT

ಹಿಂದೂ ರಾಷ್ಟ್ರ ಕುರಿತ ಹೇಳಿಕೆ ಕ್ಷಮೆ ಕೇಳಿದ ಗೋವಾ ಡಿ.ಸಿ.ಎಂ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ಪಣಜಿ (ಐಎಎನ್‌ಎಸ್‌): ಭಾರತ ಹಿಂದೂ ರಾಷ್ಟ್ರ ಎಂದು ಈಚೆಗೆ ಹೇಳಿಕೆ ನೀಡಿದ್ದ ಗೋವಾದ ಉಪಮುಖ್ಯ­ಮಂತ್ರಿ ಫ್ರಾನ್ಸಿಸ್‌ ಡಿಸೋಜಾ ಸೋಮವಾರ ಕ್ಷಮೆಯಾಚಿಸಿದ್ದಾರೆ.

‘ನನ್ನ ಅಭಿಪ್ರಾಯ ಕೆಲವರಿಗೆ ತಪ್ಪಾಗಿ ಕಂಡಿರಬಹುದು. ಸಂಪೂರ್ಣ ಸರಿ ಎಂಬುದನ್ನು ನಾನೂ ಒಪ್ಪಿಕೊ­ಳ್ಳುವುದಿಲ್ಲ. ನನ್ನ ಹೇಳಿಕೆಯಿಂದ ಯಾರ ಭಾವನೆಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದು ಡಿಸೋಜಾ ಹೇಳಿದ್ದಾರೆ.
‘ಹಿಂದುತ್ವ ನನ್ನ ಸಂಸ್ಕೃತಿ. ಕ್ರಿಶ್ಚಿಯಾನಿಟಿ ನನ್ನ ಧರ್ಮ. ನಾನು ಹಿಂದೂ ಎಂದು ಹೇಳಿಕೊಂಡರೆ ಅದರರ್ಥ ಸಂಸ್ಕೃತಿಯೇ ಹೊರತು ಧರ್ಮವಲ್ಲ. ಹಿಂದೂ ಸಂಸ್ಕೃತಿ ಐದು ಸಾವಿರ ವರ್ಷಗಳಷ್ಟು ಹಾಗೂ ನನ್ನ ಧರ್ಮ ಎರಡು ಸಾವಿರ ವರ್ಷಗಳಷ್ಟು ಹಳೆಯದು’ ಎಂದು ಹೇಳಿದ್ದಾರೆ.

‘ಭಾರತ ಒಂದು ಹಿಂದೂ ರಾಷ್ಟ್ರ. ಇದು ಹಿಂದೂಸ್ತಾನ. ನನ್ನನ್ನೂ ಒಳಗೊಂಡಂತೆ ಎಲ್ಲಾ ಭಾರತೀಯರೂ ಹಿಂದೂಗಳು. ನಾನು ಒಬ್ಬ ಕ್ರಿಶ್ಚಿಯನ್‌ ಹಿಂದೂ’ ಎಂದು ಡಿಸೋಜಾ ಶುಕ್ರವಾರ ಹೇಳಿದ್ದರು. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.