ADVERTISEMENT

ಹಿರಿಯ ನಾಗರಿಕರಿಗೆ 60 ವರ್ಷದ ಏಕರೂಪ ಮಾನದಂಡ

ಪಿಟಿಐ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಹಿರಿಯ ನಾಗರಿಕರಿಗೆ 60 ವರ್ಷದ ಏಕರೂಪ ಮಾನದಂಡ
ಹಿರಿಯ ನಾಗರಿಕರಿಗೆ 60 ವರ್ಷದ ಏಕರೂಪ ಮಾನದಂಡ   

ನವದೆಹಲಿ: ಹಿರಿಯ ನಾಗರಿಕರು ಎಂದು ಪರಿಗಣಿಸಲು 60 ವರ್ಷವನ್ನು ಏಕರೂಪ ಮಾನದಂಡವನ್ನಾಗಿ ರೂಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಇದೇ ಮಾನದಂಡದ ಆಧಾರದ ಮೇಲೆ ಎಲ್ಲ ಇಲಾಖೆಗಳು ಮತ್ತು ಖಾಸಗಿ ಸಂಸ್ಥೆಗಳು  ಹಿರಿಯ ನಾಗರಿಕರಿಗೆ ಸೌಲಭ್ಯಗಳನ್ನು ಕಲ್ಪಿಸುವುದು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ‘ಪೋಷಕರ ಕಲ್ಯಾಣ ಮತ್ತು ನಿರ್ವಹಣೆ ಹಾಗೂ ಹಿರಿಯ ನಾಗರಿಕರ (ಎಂಡಬ್ಲ್ಯುಪಿಎಸ್‌ಸಿ) ಕಾಯ್ದೆ–2007ಕ್ಕೆ’ ತಿದ್ದುಪಡಿ ತರಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಚಿಂತನೆ ನಡೆಸಿದೆ.

ಎಂಡಬ್ಲ್ಯುಪಿಎಸ್‌ಸಿ ಕಾಯ್ದೆ ಪ್ರಕಾರ ‘60 ವರ್ಷ ಮತ್ತು ಮೇಲ್ಪಟ್ಟ’ ಭಾರತೀಯ ಪ್ರಜೆಗಳು ಹಿರಿಯ ನಾಗರಿಕರು ಎಂದು ಪರಿಗಣಿಸಲಾಗಿದೆ. ಆದರೆ, ಕೆಲವು ಸಂಸ್ಥೆಗಳು ‘60 ವರ್ಷ ಮತ್ತು ಮೇಲ್ಪಟ್ಟ’ ಎನ್ನುವ ಅಂಶವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ.  ವಿವಿಧ ರೀತಿಯಲ್ಲಿ ವಯೋಮಾನವನ್ನು ನಿಗದಿಪಡಿಸಿ ಹಿರಿಯ ನಾಗರಿಕರಿಗೆ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ರೈಲ್ವೆ ಪ್ರಯಾಣ ದರದ ಹಿರಿಯರ ನಾಗರಿಕ ಕೋಟಾದಲ್ಲಿ ರಿಯಾಯಿತಿ ಪಡೆಯಲು ಮಹಿಳೆಯರಿಗೆ 58 ವರ್ಷ, ಪುರುಷರಿಗೆ 60 ವರ್ಷ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.