ADVERTISEMENT

ಹಿರಿಯ ಪತ್ರಕರ್ತ ಕೆ.ಜೆ. ಸಿಂಗ್‌, ತಾಯಿಯ ಹತ್ಯೆ

ಪಿಟಿಐ
Published 23 ಸೆಪ್ಟೆಂಬರ್ 2017, 19:49 IST
Last Updated 23 ಸೆಪ್ಟೆಂಬರ್ 2017, 19:49 IST

ಮೊಹಾಲಿ : ಹಿರಿಯ ಪತ್ರಕರ್ತ ಕೆ.ಜೆ. ಸಿಂಗ್‌ (60) ಮತ್ತು ಅವರ ತಾಯಿ ಗುರುಚರಣ್‌ ಕೌರ್‌ (92) ಅವರ ಮೃತದೇಹಗಳು ಅವರ ಮನೆಯಲ್ಲಿ ಪತ್ತೆಯಾಗಿದ್ದು ಇದು ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸಿಂಗ್‌ ಅವರ ಕತ್ತು ಸೀಳಲಾಗಿದೆ. ಗುರುಚರಣ್‌ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂದು ಮುಖ್ಯಮಂತ್ರಿ ಕಾರ್ಯಾಲಯದ ವಕ್ತಾರರು ತಿಳಿಸಿದ್ದಾರೆ. ಎರಡೂ ಮೃತದೇಹಗಳ ಕುತ್ತಿಗೆಯಲ್ಲಿ ಗಾಯಗಳಿದ್ದವು ಎಂದು ಮೊಹಾಲಿ ಡಿಎಸ್‌ಪಿ ಆಲಂ ವಿಜಯ್‌ ಸಿಂಗ್‌ ಹೇಳಿದ್ದಾರೆ.

ಪ್ರಕರಣದ ತನಿಖೆಗೆ ಪೊಲೀಸ್‌ ಮಹಾ ನಿರೀಕ್ಷಕರ (ಅಪರಾಧ) ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ADVERTISEMENT

ಸಿಂಗ್ ಅವರು ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿದ್ದರು. ಅವರು ದ ಟ್ರಿಬ್ಯೂನ್‌ ಮತ್ತು ದ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ಪಂಜಾಬ್‌, ಹರಿಯಾಣ ಮತ್ತು ಚಂಡೀಗಡದ ಮಾಧ್ಯಮ ಪ್ರತಿನಿಧಿಗಳು ಈ ಹತ್ಯೆಯನ್ನು ಖಂಡಿಸಿದ್ದಾರೆ. ತ್ವರಿತವಾಗಿ ತನಿಖೆ ನಡೆಸಿ ಹಂತಕರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.