ADVERTISEMENT

ಹೀಗಿತ್ತು ನಮ್ಮ ಪಯಣದ ಹಾದಿ...

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2014, 19:30 IST
Last Updated 24 ಸೆಪ್ಟೆಂಬರ್ 2014, 19:30 IST

*ನವೆಂಬರ್‌ 5, 2013: ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಮಾರ್‍್ಸ ಆರ್ಬಿಟರ್‌ (ಮಂಗಳ ನೌಕೆ) ಹೊತ್ತ ಪಿಎಸ್‌ಎಲ್‌ವಿ  ಸಿ–25 ಯಶಸ್ವಿ ಉಡಾವಣೆ. ಇಸ್ರೊದ ಮಹತ್ವಾಕಾಂಕ್ಷೆಯ ಮಂಗಳಯಾನ ಯೋಜನೆಗೆ ಚಾಲನೆ.
*ನವೆಂಬರ್‌ 7: ಭೂಕಕ್ಷೆಯಲ್ಲಿ ನೌಕೆಯ ಮೊದಲ ಪಥ ಬದಲಾವಣೆ ಯಶಸ್ವಿ
*ನವೆಂಬರ್‌ 16: ಭೂಕಕ್ಷೆಯಲ್ಲಿ ಆರನೇ ಹಾಗೂ ಅಂತಿಮ ಹಂತದ ಪಥ ಬದಲಾವಣೆ
*ಡಿಸೆಂಬರ್ 1: ಮೊದಲ ಬಾರಿ ಭೂಕಕ್ಷೆಯಿಂದ ತಪ್ಪಿಸಿಕೊಂಡು ಸೂರ್ಯ ಕೇಂದ್ರಿತ ಪ್ರಭಾವಲಯಕ್ಕೆ ನೌಕೆ ಪ್ರವೇಶ
*ಡಿಸೆಂಬರ್‌ 4: ಭೂ ವಾತಾವರಣ ವಲಯದಿಂದ ಮುಂದಿನ ಹಂತ ಪ್ರವೇಶಿಸಿದ ನೌಕೆ. ಸೂರ್ಯನ ಪ್ರದಕ್ಷಿಣೆಯೊಂದಿಗೆ ಮಂಗಳನತ್ತ ಹತ್ತು ತಿಂಗಳ ಪಯಣ ಆರಂಭಿಸಿದ ನೌಕೆ. 
*ಡಿಸೆಂಬರ್‌ 11: ನೌಕೆಯಲ್ಲಿ ಮೊದಲ ಪಥ ಸರಿಪಡಿಸುವಿಕೆ
*ಜೂನ್‌ 11, 2014: ಎರಡನೇ ಹಂತದ ಪಥ ಸರಿಪಡಿಸುವಿಕೆ
*ಸೆಪ್ಟೆಂಬರ್‌ 22, 2014: ಬಾಹ್ಯಾಕಾಶದಿಂದ ಮಂಗಳನ ಗುರುತ್ವ ವಲಯಕ್ಕೆ ಪ್ರವೇಶಿಸಿದ ಮಂಗಳ ನೌಕೆ. 300 ದಿನ ನಿಷ್ಕ್ರಿಯವಾಗಿದ್ದ ಮುಖ್ಯ ದ್ರವ  ಎಂಜಿನ್ನಿಗೆ ಪರೀಕ್ಷಾರ್ಥ ಚಾಲನೆ. ಅಂತಿಮ ಹಂತದ ತಾಂತ್ರಿಕ ಕಾರ್ಯಾಚರಣೆ ಯಶಸ್ವಿ.
*ಸೆಪ್ಟೆಂಬರ್‌ 24, 2014: ಚೊಚ್ಚಲ ಯತ್ನದಲ್ಲೇ  ಮಂಗಳ ಗ್ರಹದ ನಿಗದಿತ ಕಕ್ಷೆ ಸೇರಿದ ಭಾರತದ ಮೊದಲ ಮಾರ್‍ಸ್‌ ಆರ್ಬಿಟರ್‌.

ಯೋಜನಾ ವೆಚ್ಚ
*ಒಟ್ಟು ಯೋಜನೆ: ₨ 450 ಕೋಟಿ
*ರಾಕೆಟ್‌: ₨ 110 ಕೋಟಿ
*ಮಂಗಳ ನೌಕೆ: ₨ 150 ಕೋಟಿ
*ನಿಗಾ ವ್ಯವಸ್ಥೆ ಮತ್ತು ನಿರ್ವಹಣಾ ವೆಚ್ಚ ಸೇರಿದಂತೆ ಇತರ ಕಾರ್ಯಕ್ಕೆ
₨ 190 ಕೋಟಿ

ಮಂಗಳಯಾನದ ಸೂತ್ರಧಾರಿಗಳು
*ಕೆ.ರಾಧಾಕೃಷ್ಣನ್‌್: ಇಸ್ರೊ ಅಧ್ಯಕ್ಷ
*ಎಂ.ಅಣ್ಣಾದೊರೈ: ಮಾರ್ಸ್‌್ ಆರ್ಬಿಟರ್‌್ ಮಿಷನ್‌ ಕಾರ್ಯಕ್ರಮ ನಿರ್ದೇಶಕ
*ಎಸ್‌.ರಾಮಕೃಷ್ಣನ್‌:  ವಿಕ್ರಮ್‌್ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಮತ್ತು ಉಡಾವಣಾ ಅನುಮೋದನೆ ಮಂಡಳಿ ಸದಸ್ಯ
*ಎಸ್‌.ಕೆ.ಶಿವಕುಮಾರ್‌: ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕ
*ಪಿ.ಕುಂಞಕೃಷ್ಣನ್‌: ಪಿಎಸ್‌ಎಲ್‌ವಿ ಕಾರ್ಯಕ್ರಮದ ಯೋಜನಾ ನಿರ್ದೇಶಕ
*ಚಂದ್ರನಾಥನ್‌: ಲಿಕ್ವಿಡ್‌್ ಪ್ರೊಪಲ್ಷನ್‌್ ಸಿಸ್ಟಮ್‌್ ನಿರ್ದೇಶಕ
*ಎ.ಎಸ್‌.ಕಿರಣ್‌ ಕುಮಾರ್: ಉಪಗ್ರಹ ಆನ್ವಯಿಕ  ಕೇಂದ್ರದ ನಿರ್ದೇಶಕ
*ಎಂ.ವೈ.ಎಸ್‌.ಪ್ರಸಾದ್‌:  ಸತೀಶ್‌ ಧವನ್‌್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಹಾಗೂ ಉಡಾವಣಾ ಅನುಮೋದನೆ ಮಂಡಳಿ ಅಧ್ಯಕ್ಷ
*ಎಸ್‌.ಅರುಣನ್‌: ಮಾರ್ಸ್‌್ ಆರ್ಬಿಟರ್‌್ ಮಿಷನ್‌ ಯೋಜನಾ ನಿರ್ದೇಶಕ
*ಬಿ.ಜಯಕುಮಾರ್‌: ಪಿಎಸ್‌ಎಲ್‌ವಿ ಯೋಜನೆಯ ಸಹಾಯಕ ಯೋಜನಾ ನಿರ್ದೇಶಕ
*ಎಂ.ಎಸ್‌.ಪನ್ನೀರ್‌ಸೆಲ್ವಂ: ಶ್ರೀಹರಿಕೋಟಾದ ಕಾರ್ಯಾಚರಣೆ ವಿಭಾಗದ ಸಿಜಿಎಂ
*ವಿ.ಕೇಶವ ರಾಜು: ಮಾರ್ಸ್‌್ ಆರ್ಬಿಟರ್‌ ಮಿಷನ್‌್  ಕಾರ್ಯಕ್ರಮ ನಿರ್ದೇಶಕ
*ವಿ.ಕೋಟೇಶ್ವರ ರಾವ್‌: ಇಸ್ರೊದ ವೈಜ್ಞಾನಿಕ ಕಾರ್ಯದರ್ಶಿ

ADVERTISEMENT

ಮಂಗಳ ಪರ್ವ
*1960: ಮೊದಲ ಬಾರಿಗೆ ಮಂಗಳಯಾನ ಆರಂಭಿಸಿದ ಶ್ರೇಯ ಸೋವಿಯತ್‌ ರಷ್ಯಾಕ್ಕೆ ಸಲ್ಲುತ್ತದೆ.  ಆದರೆ, ಆಗಸ್ಟ್‌ 10ರಂದು ಉಡಾವಣೆ ಮಾಡಿದ ಮೊದಲ ನೌಕೆ ಮಾರ್ಸನಿಕ್–1  (ಕೊರಬಲ್‌–4) ನೌಕೆ ಭೂಕಕ್ಷೆ ದಾಟಲು ಸಾಧ್ಯವಾಗದೆ ಮಾರ್ಗಮಧ್ಯೆ ಕೈಕೊಟ್ಟಿತು. ಅದಾದ ನಂತರ ಹತ್ತು ವರ್ಷಗಳಲ್ಲಿ ರಷ್ಯಾ ನಡೆಸಿದ 11 ಯತ್ನಗಳು ವಿಫಲವಾದವು. ಎರಡು ನೌಕೆ ಮಾರ್ಗಮಧ್ಯೆ ಸ್ಫೋಟಗೊಂಡವು.  ರಷ್ಯಾ ಸರಣಿ ವೈಫಲ್ಯ  ಅನುಭವಿಸಿತು. 1973ರಲ್ಲಿ ಮೊದಲ ಬಾರಿಗೆ ರಷ್ಯಾದ ಮಾರ್‍್ಸ್–5 ಯಶಸ್ವಿಯಾಗಿ ಮಂಗಳನ ಅಂಗಳದ ಮೇಲೆ ಇಳಿಯಿತು.
*1964:  ಅಮೆರಿಕದ ನಾಸಾ ಮೊದಲ ಬಾರಿಗೆ ಹಾರಿಬಿಟ್ಟ ಮರೈನರ್‌ –3 ವಿಫಲವಾಯಿತು. ಇದೇ ವರ್ಷ ಉಡಾವಣೆ ಮಾಡಿದ ಮತ್ತೊಂದು ನೌಕೆ ಮರೈನರ್‌–4 ಯಶಸ್ವಿಯಾಗಿ ಅಂಗಾರಕನ 21 ಚಿತ್ರ ಕಳಿಸಿತು. ನಂತರ ಮೂರು ಯತ್ನಗಳು ಕೈಕೊಟ್ಟವು.
*1975: ಅಮೆರಿಕದ ವೈಕಿಂಗ್–1 ಮೊದಲ ಬಾರಿ ಯಶಸ್ವಿಯಾಗಿ ಮಂಗಳನ ಮೇಲೆ ಕಾಲಿಟ್ಟ ನೌಕೆ ಎಂಬ ಹೆಗ್ಗಳಿಕೆ ಪಡೆದಿದೆ.
*1998: ಅಮೆರಿಕ ಮತ್ತು ರಷ್ಯಕ್ಕೆ ಮಾತ್ರ ಸೀಮಿತವಾಗಿದ್ದ ಕ್ಷೇತ್ರಕ್ಕೆ ಲಗ್ಗೆಯಿಟ್ಟ  ಏಷ್ಯಾ ಖಂಡದ ಮೊದಲ ರಾಷ್ಟ್ರ ಜಪಾನ್. ಆದರೆ, ಅದು ಮಂಗಳ ಯಾತ್ರೆಯ ಮೊದಲ ಯತ್ನದಲ್ಲಿಯೇ ಕೈಸುಟ್ಟುಕೊಂಡಿತು. ಇಂಧನ ವ್ಯವಸ್ಥೆ ಕೈಕೊಟ್ಟ ಕಾರಣ ನೊಜೋಮಿ ನೌಕೆ ಕಕ್ಷೆ ಸೇರಲು ವಿಫಲವಾಯಿತು.
*2001: ಅಮೆರಿಕದ ನಾಸಾದ ಮಾರ್‍್ಸ್ ಒಡಿಸ್ಸಿ ಮಂಗಳನಲ್ಲಿ ಅತಿ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ನೌಕೆ.
*200v3: ಐರೋಪ್ಯ ರಾಷ್ಟ್ರಗಳ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ಹಾರಿಬಿಟ್ಟ ಮಾರ್‍್ಸ್ ಎಕ್ಸ್‌ಪ್ರೆಸ್ ಆರ್ಬಿಟರ್‌/ ಬೀಗಲ್‌ 2 ಲ್ಯಾಂಡರ್‌ ಯಶಸ್ವಿಯಾಗಿ ಮಂಗಳನ ಮೇಲಿಳಿದು ಸ್ಪಷ್ಟವಾದ ಚಿತ್ರಗಳನ್ನು ಕಳಿಸಿತಾದರೂ ಭೂಮಿಗೆ ವಾಪಾಸ್‌ ಆಗುವಾಗ ಸಂಪರ್ಕ ಕಡಿದುಕೊಂಡಿತು.
*2003: ನಾಸಾದ ಸ್ಪಿರಿಟ್‌ ಹಾಗೂ ಅಪರ್ಚುನಿಟಿ ರೋವರ್‌ ಪೈಕಿ ಸ್ಪಿರಿಟ್‌ 2009ರಲ್ಲಿ ಮರಳಿನಲ್ಲಿ ಸಿಲುಕಿ ಕಾರ್ಯಾಚರಣೆ ಕೊನೆಗೊಳಿಸಿತು. ಅಪರ್ಚುನಿಟಿ ಇನ್ನೂ ಮಂಗಳನಲ್ಲಿದೆ.
*2011: ರಷ್ಯಾ ಮತ್ತು ಚೀನಾದ ಜಂಟಿ ಮಂಗಳ ಯಾತ್ರೆ. ಫೋಬೋಸ್‌ ಗ್ರಾಂಟ್‌ ಮಿಷನ್‌/ ಯಿಂಗ್ಯೂ –1 ವಿಫಲವಾಯಿತು. ನೌಕೆ ಭೂಕಕ್ಷೆಯಲ್ಲಿಯೇ ಉಳಿಯಿತು.
*2011: ಮಂಗಳನಲ್ಲಿ ನಾಸಾ ಇಳಿಸಿದ ಅತಿ ದೊಡ್ಡ ನೌಕೆ ಕ್ಯೂರಿಯಾಸಿಟಿ. ಈಗಲೂ ಆ ಗ್ರಹದಲ್ಲಿ ನಾಸಾದ ಪ್ರಯೋಗಾಲಯದಂತೆ ಕೆಲಸ ಮಾಡುತ್ತಿದೆ.
*2013: ಭಾರತದ ಮಂಗಳಯಾನದ ಯಶಸ್ಸು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.