ADVERTISEMENT

ಹುಟ್ಟಿದ ಆರೇ ನಿಮಿಷದಲ್ಲಿ ಆಧಾರ್!

ಏಜೆನ್ಸೀಸ್
Published 25 ಸೆಪ್ಟೆಂಬರ್ 2017, 4:36 IST
Last Updated 25 ಸೆಪ್ಟೆಂಬರ್ 2017, 4:36 IST
ಹುಟ್ಟಿದ ಆರೇ ನಿಮಿಷದಲ್ಲಿ ಆಧಾರ್!
ಹುಟ್ಟಿದ ಆರೇ ನಿಮಿಷದಲ್ಲಿ ಆಧಾರ್!   

ಉಸ್ಮಾನಾಬಾದ್‌ (ಮಹಾರಾಷ್ಟ್ರ): ಹುಟ್ಟಿದ ಆರು ನಿಮಿಷಗಳಲ್ಲೇ ಆಧಾರ್‌ ಸಂಖ್ಯೆ ದಕ್ಕಿಸಿಕೊಂಡ ಇಲ್ಲಿಯ ಪುಟಾಣಿಯೊಂದು ಇದೀಗ ಭಾರಿ ಪ್ರಚಾರ ಗಿಟ್ಟಿಸಿಕೊಂಡಿದೆ.

ಈ ಮಗುವಿನ ಹೆಸರು ಭಾವನಾ. ಈಕೆ ಹುಟ್ಟಿದ್ದು ಭಾನುವಾರ ಮಧ್ಯಾಹ್ನ 12.03ಕ್ಕೆ. ಮಗು ಹುಟ್ಟಿದ ತಕ್ಷಣ ಈಕೆಯ ತಂದೆ ಸಂತೋಷ್‌ ಜಾಧವ್‌ ಅವರು ಆನ್‌ಲೈನ್‌ ಮೂಲಕ ಅದರ ನೋಂದಣಿ ಮಾಡಿಸಿದರು. 12.09 ನಿಮಿಷಕ್ಕೆ ಅವರಿಗೆ ಆನ್‌ಲೈನ್‌ ಮೂಲಕ ಮಗುವಿನ ಜನನ ಪ್ರಮಾಣ ಪತ್ರ ಸಿಕ್ಕಿತು. ಇದರ ಜೊತೆಗೇ ಆಧಾರ್‌ ಸಂಖ್ಯೆ ಕೂಡ ಸಿಕ್ಕಿತು.

ಈ ಆಸ್ಪತ್ರೆಯಲ್ಲಿ ಈ ಒಂದು ವರ್ಷದಲ್ಲಿ ಹುಟ್ಟಿರುವ ಸುಮಾರು 1,300 ಮಕ್ಕಳಿಗೆ ಈಗಾಗಲೇ ಆಧಾರ್‌ ಸಂಖ್ಯೆ ಸಿಕ್ಕಿದೆ ಎಂದು ಅವರು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.