ADVERTISEMENT

‘ಕಸಾಬ್‌ನಂತೆ ತಪ್ಪು ಮಾಡಬೇಡಿ’

​ಪ್ರಜಾವಾಣಿ ವಾರ್ತೆ
Published 6 ಜುಲೈ 2014, 19:30 IST
Last Updated 6 ಜುಲೈ 2014, 19:30 IST

ಶ್ರೀನಗರ/ನವದೆಹಲಿ: ‘ಅಜ್ಮಲ್‌ ಕಸಾಬ್‌ ಮುಂಬೈ ದಾಳಿ ವೇಳೆ ಮಾಡಿದ ತಪ್ಪನ್ನು ನೀವೂ ಮಾಡಬೇಡಿ’.
–ಪಾಕಿಸ್ತಾನ ಮೂಲದ ಲಷ್ಕರ್‌–ಎ–ತಯಬಾ (ಎಲ್‌ಇಟಿ) ತನ್ನ ನೂತನ ಸದಸ್ಯರಿಗೆ ತರಬೇತಿ ನೀಡು­ವಾಗ ಹೇಳುವ ಕಿವಿ ಮಾತು ಇದು.

ಕಳೆದ ತಿಂಗಳು ದಕ್ಷಿಣ ಕಾಶ್ಮೀರದಲ್ಲಿ ಬಂಧಿತನಾದ ಎಲ್‌ಇಟಿ ಉಗ್ರ ಮೊಹಮ್ಮದ್‌ ನವೀದ್‌ ಜಟ್‌ ಅಲಿಯಾಸ್‌ ಅಬು ಹಂಜಾಲಾ ಈ ವಿಷಯ ಬಾಯಿ­ಬಿಟ್ಟಿ­ದ್ದಾನೆ. ‘ಮುಂಬೈ ಕರಾವಳಿಗೆ ತಮ್ಮನ್ನು ಕರೆದು­ಕೊಂಡು ಬಂದಿದ್ದ ದೋಣಿ­ಯನ್ನು ಧ್ವಂಸಗೊಳಿಸಿರ­ಲಿಲ್ಲ. ಕಸಾಬ್‌್ ಮಾಡಿದ ತಪ್ಪುಗಳಲ್ಲಿ ಇದೂ ಒಂದು’ ಎಂದು ತರಬೇತಿ ನೀಡುವಾಗ ಎಲ್‌ಇಟಿ ಹೇಳಿತ್ತು.

ರೈಲ್ವೆಯಲ್ಲಿ ಎಫ್‌ಡಿಐ: ವಿರೋಧ
ನವದೆಹಲಿ (ಪಿಟಿಐ): ರೈಲ್ವೆ ವಲಯದ ಅತಿಸೂಕ್ಷ್ಮ ವಿಭಾಗಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅನುಮತಿ ನೀಡುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ವಿರೋಧಿಸಿರುವ ಗೃಹಸಚಿವಾಲಯ, ಇದು ದೇಶದ ಅತಿ ದೊಡ್ಡ ಸಾರಿಗೆ ಜಾಲದ ಭದ್ರತೆಗೆ ತೊಡಕಾಗುವ ಅಪಾಯವಿದೆ ಎಂದು ಎಚ್ಚರಿಸಿದೆ.

ಅತಿ ವೇಗದ ರೈಲ್ವೆ ವ್ಯವಸ್ಥೆ ಮತ್ತು ಸರಕು ಸಾಗಣೆ ರೈಲು ಮಾರ್ಗದಂಥ ವಿಭಾಗಗಳಲ್ಲಿ ಶೇಕಡ 100ರಷ್ಟು ಎಫ್‌ಡಿಐ ಹೂಡಿಕೆಯ ಕರಡು ಪ್ರಸ್ತಾವನೆಗೆ ಸಚಿವಲಯ ವಿರೋಧ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.