ADVERTISEMENT

‘ಡಿಜಿಟಲ್‌ ಇಂಡಿಯಾ’ಕ್ಕೆ 800 ಕೋಟಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 19:30 IST
Last Updated 15 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ):  ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ ‘ಡಿಜಿಟಲ್‌ ಇಂಡಿಯಾ’ ಯೋಜನೆಗೆ ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ ₨ 800 ಕೋಟಿ ನೀಡಲಿದೆ.

ಈ ಹಣವನ್ನು ಸೈಬರ್‌ ಭದ್ರತಾ ಕ್ರಮಗಳಿಗೆ ಬಳಸಲಾಗುತ್ತದೆ. ಕಂಪ್ಯೂ ಟರ್‌ ವ್ಯವಸ್ಥೆ ಹಾಳು ಮಾಡುವ ವೈರಸ್‌ ಮತ್ತಿತರ ತೊಂದರೆ ನಿವಾರಣೆಗೆ ಸ್ಥಾಪಿಸ­ಲಾ­­ಗುವ ಕೇಂದ್ರಕ್ಕೆ ಈ ಹಣ ಬಳಸ­ಲಾ­ಗುತ್ತದೆ.  ‘ಸುಮಾರು  800 ಕೋಟಿ ವೆಚ್ಚ­­­ದಲ್ಲಿ ರಾಷ್ಟ್ರೀಯ ಸೈಬರ್‌ ಸಮ­ನ್ವಯ ಕೇಂದ್ರವೊಂದನ್ನು ಸ್ಥಾಪಿಸ­ಲಾಗು­ವುದು. ಇದಕ್ಕಾಗಿ ಅಂತರ ಸಚಿವಾ­ಲ­ಯದ ಸಲಹೆ ಪಡೆಯಲಾಗುವುದು. ಕಂಪ್ಯೂ­­­ಟರ್‌­­ಗಳನ್ನು ವೈರಸ್‌ನಿಂದ ದೂರ­ವಿಟ್ಟು ಸ್ವಚ್ಛ­ಗೊಳಿಸಲು ಈ ಕೇಂದ್ರ ನೆರ­ವಾ­ಗ­ಲಿದೆ’ ಎಂದು ದೂರಸಂಪರ್ಕ
ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದರು.

ಯೋಜನೆಗೆ ಸಚಿವ ಸಂಪುಟ ಅನು­ಮೋದನೆ ನೀಡಬೇಕಿದೆ. ಇದ­ರೊಂ­ದಿಗೆ ಸರ್ಕಾರ  270 ಕೋಟಿ ವೆಚ್ಚ­ದಲ್ಲಿ ಇ–ಆಡ­ಳಿತ ಭದ್ರತಾ ಕೇಂದ್ರ ಸ್ಥಾಪಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.