ADVERTISEMENT

‘ಪರಮಾಣು ವಿದ್ಯುತ್‌ ಸ್ಥಾವರದಿಂದ ಹಿಂದೆ ಸರಿಯಲಾರೆವು: ಫಡಣವೀಸ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST

ಮುಂಬೈ (ಪಿಟಿಐ): ಮಿತ್ರ ಪಕ್ಷ ಶಿವಸೇನಾ ವಿರೋಧಕ್ಕೆ ಮನ್ನಣೆ ನೀಡದಿರಲು ನಿರ್ಧರಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಯಾವುದೇ ಕಾರಣಕ್ಕೂ ಜೈತಾಪುರ ಪರಮಾಣು ವಿದ್ಯುತ್‌ ಸ್ಥಾವರ ನಿರ್ಮಾಣ ಕೈಬಿಡುವ ಪ್ರಶ್ನೆಯೇ ಇಲ್ಲ. ದೇಶಕ್ಕೆ ವಿದ್ಯುತ್‌ ಉತ್ಪಾದನೆಯ ಅವಶ್ಯಕತೆ ಇದೆ ಎಂದಿದ್ದಾರೆ.

ಯೋಜನೆ ಅನುಷ್ಠಾನದಿಂದ ಈ ಸಮಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಖಡಾಖಂಡಿತ ವಾಗಿ ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಣುಸ್ಥಾವರ ಸ್ಥಾಪನೆ ಬೇಡ ಎಂದು ಮಿತ್ರಪಕ್ಷ ಶಿವಸೇನೆ ವಿರೋಧಿಸುತ್ತಲೇ ಬಂದಿದೆ. ಎಷ್ಟೇ ಖರ್ಚಾದರೂ ಸ್ಥಾಪನೆ ಮಾಡಲಿದ್ದೇವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.