ಬಾಲಾಸೊರ್ (ಒಡಿಶಾ) (ಪಿಟಿಐ): ಎರಡು ಸ್ತರಗಳ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲು ಎನ್ನಲಾದ ದೇಶದ ಮೊದಲ ‘ಪೃಥ್ವಿ ರಕ್ಷಣಾ ವಾಹಕ’ದ (ಪಿಡಿವಿ) ಪರೀಕ್ಷಾರ್ಥ ಪ್ರಯೋಗ ಭಾನುವಾರ ಯಶಸ್ವಿಯಾಗಿ ನಡೆದಿದೆ.
ಬಂಗಾಳ ಕೊಲ್ಲಿಯಲ್ಲಿ ಹಡಗಿನಿಂದ ಪಿಡಿವಿಯನ್ನು ಬೆಳಿಗ್ಗೆ 9.07 ನಿಮಿಷಕ್ಕೆ ಉಡಾಯಿಸಲಾಯಿತು ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಹೇಳಿಕೆಯಲ್ಲಿ ತಿಳಿಸಿದೆ. ‘120 ಕಿ.ಮೀ. ಎತ್ತರಕ್ಕೂ ಹೆಚ್ಚಿನ ದೂರದ ವಾಯುಮಂಡಲ ಆಚೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಗುರಿಯನ್ನು ಇರಿಸಿಕೊಂಡು ಈ ಪಿಡಿವಿಯನ್ನು ಅಭಿವೃದ್ಧಿ ಪಡಿಸಲಾಗಿದೆ’ ಎಂದು ವಿವರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.