ADVERTISEMENT

‘ಬದುಕಿರುವುದೇ ಅಮ್ಮನ ಧೈರ್ಯದಿಂದ’

​ಪ್ರಜಾವಾಣಿ ವಾರ್ತೆ
Published 27 ಜೂನ್ 2014, 19:30 IST
Last Updated 27 ಜೂನ್ 2014, 19:30 IST

ಭೋಪಾಲ್ (ಪಿಟಿಐ): ‘ನಾನು ಹುಟ್ಟಿದಾಗ  ‘ಹೆಣ್ಣು’ ಕುಟುಂಬಕ್ಕೆ ಹೊರೆ (ಬೇಟಿ ತೋ ಭೋಜಾ ಹೋತಿ ಹೈ) ಎಂದು ಕೆಲವರು ನನ್ನ ತಾಯಿಯ ಕಿವಿಯೂದಿದ್ದರು. ಅವರ ಮಾತು ಕೇಳಿ ತಾಯಿ ನನ್ನನ್ನು ಕೊಲ್ಲಬೇಕಿತ್ತು. ಆದರೆ,  ಧೈರ್ಯಶಾಲಿಯಾಗಿದ್ದ ನನ್ನ ಅಮ್ಮ ಹಾಗೆ ಮಾಡಲಿಲ್ಲ. ಹೀಗಾಗಿ ನಾನು ಇಂದು ನಿಮ್ಮ ಮುಂದೆ ನಿಂತಿದ್ದೇನೆ’

– ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ತಮ್ಮ ಜನ್ಮದ ವೇಳೆ ನಡೆದ ಸತ್ಯ ಘಟನೆ ಬಿಚ್ಚಿಟ್ಟ ಬಗೆ ಇದು.

‘ಹೆಣ್ಣು ಭ್ರೂಣ ಹತ್ಯೆ ತಡೆ ನಮ್ಮ ಮೊದಲ ಆದ್ಯತೆ’ ಎಂದು ಕೇಂದ್ರ ಸರ್ಕಾರದ ನಿಲುವನ್ನು ತಿಳಿಸುವ ಜತೆಗೆ ತಮ್ಮ ಜೀವನದ ಈ ಘಟನೆಯನ್ನು ಅವರು  ಮೆಲುಕು ಹಾಕಿದರು.

ಜತೆಗೆ ತಮ್ಮ ಈ ಸಾಧನೆಗೆ ಕಾರಣರಾದ ತಾಯಿಗೆ ಧನ್ಯವಾದ ಹೇಳಲು ಅವರು ಮರೆಯಲಿಲ್ಲ. ವಿದ್ಯಾರ್ಥಿಗಳ ಜತೆ ಸಂವಾದ ಕಾರ್ಯಕ್ರಮವೊಂದರಲ್ಲಿ ಇದೇ ಮೊದಲ ಬಾರಿಗೆ ಇರಾನಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಘಟನೆಯನ್ನು ಬಹಿರಂಗಪಡಿಸಿದರು.

‘ಹೆಣ್ಣೊಂದು ಕಲಿತರೆ ಶಾಲೆ­ಯೊಂದು ತೆರೆದಂತೆ. ರಾಷ್ಟ್ರವನ್ನು ಕಟ್ಟಿದಂತೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.