ADVERTISEMENT

‘ಭಾರತ ರತ್ನಕ್ಕೆ ಧ್ಯಾನ್‌ಚಂದ್ ಅರ್ಹ’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2014, 11:08 IST
Last Updated 27 ಡಿಸೆಂಬರ್ 2014, 11:08 IST

ಚಂಡೀಗಡ್ (ಪಿಟಿಐ): ಭಾರತ ರತ್ನ ಪುರಸ್ಕಾರಕ್ಕೆ ಪಾತ್ರರಾಗಿರುವ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ದಿವಂಗತ ಶಿಕ್ಷಣ ತಜ್ಞ ಮದನ ಮೋಹನ ಮಾಳವೀಯ ಅವರಿಗೆ ಅಭಿನಂದನೆ ಸಲ್ಲಿಸಿರುವ ಖ್ಯಾತ ಅಥ್ಲೀಟ್‌ ಮಿಲ್ಖಾಸಿಂಗ್, ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಅವರೂ ದೇಶದ ಅತ್ಯುನ್ನತ ನಾಗರಿಕ ಗೌರವಕ್ಕೆ ಯೋಗ್ಯ ವ್ಯಕ್ತಿ ಎಂದು ಒತ್ತಿ ಹೇಳಿದ್ದಾರೆ.

‘ಭಾರತ ರತ್ನಕ್ಕೆ ಪರಿಗಣಿಸಲಾದ ವಾಜಪೇಯಿ ಹಾಗೂ ಮಾಳವೀಯ ಅವರಿಗೆ ನನ್ನ ಅಭಿನಂದನೆಗಳು’ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ಭಾರತಕ್ಕೆ ಮೂರು ಒಲಿಂಪಿಕ್‌ ಚಿನ್ನವನ್ನು ದೊರಕಿಸಿಕೊಟ್ಟ ಧ್ಯಾನ್‌ಚಂದ್ ಅವರೂ ಈ ಗೌರವಕ್ಕೆ ಯೋಗ್ಯವಾದ ವ್ಯಕ್ತಿ ಎಂದಿದ್ದಾರೆ.

ADVERTISEMENT

‘ದೇಶಕ್ಕೆ ಅಮೋಘ ಸೇವೆಗೈದಿರುವ ಧ್ಯಾನ್‌ಚಂದ್ ಅವರಿಗೆ ಭಾರತ ರತ್ನ ನೀಡುವುದನ್ನು ನೋಡುವುದು ನನ್ನ ಆಶಯ’ ಎಂದು ಮಿಲ್ಖಾ ಸಿಂಗ್‌ ನುಡಿದಿದ್ದಾರೆ.

ಧ್ಯಾನ್‌ಚಂದ್ ಅವರ ನೇತೃತ್ವದಲ್ಲಿ ಭಾರತ ಹಾಕಿ ತಂಡವು 1928, 1932 ಹಾಗೂ 1936ರಲ್ಲಿ ನಡೆದ ಒಲಿಂಪಿಕ್ಸ್‌ ಕೂಟಗಳಲ್ಲಿ ಬಂಗಾರದ ಸಾಧನೆ ತೋರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.