ADVERTISEMENT

‘ಮೈತ್ರಿ ಬಿರುಕಿಗೆ ನಾವು ಕಾರಣರಲ್ಲ’

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 12:20 IST
Last Updated 30 ಸೆಪ್ಟೆಂಬರ್ 2014, 12:20 IST

ಜಮ್ಮು (ಪಿಟಿಐ): 15 ವರ್ಷಗಳಷ್ಟು ಸುದೀರ್ಘ ಮೈತ್ರಿ ಕೊನೆಗಾಣಲು ಕಾಂಗ್ರೆಸ್ ಕಾರಣ ಎಂಬ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರ ಆರೋಪವನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ನಿರಾಕರಿಸಿದ್ದಾರೆ.

‘ಮೈತ್ರಿ ಬಿರುಕಿಗೆ ನಾವು ಕಾರಣರಲ್ಲ. ನಾನೂ ಅಲ್ಲ, ರಾಹುಲ್‌ ಕೂಡ ಅಲ್ಲ. ಕಾಂಗ್ರೆಸ್ಸೂ ಅಲ್ಲ’ ಎಂದು ಪವಾರ್ ಅವರ ಟೀಕೆಯ ಬಗೆಗಿನ ಪ್ರಶ್ನೆಗೆ  ಸೋನಿಯಾ ಅವರು ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ತಂಡ ಮೈತ್ರಿಯ ಸಹಭಾಗಿದಾರರನ್ನು ಮಿತಿಯಲ್ಲಿರಿಸಲು ಯತ್ನಿಸುತ್ತಿದ್ದರು ಎಂಬುದುನ್ನು ತಮ್ಮ ಪಕ್ಷ ತುಂಬಾ ಸಮಯದಿಂದ ಗಮನಿಸಿತ್ತು ಎಂಬುದಾಗಿ ಪವಾರ್‌ ಹೇಳಿದ್ದರು ಎನ್ನಲಾಗಿದೆ.

ADVERTISEMENT

1999ರಲ್ಲಿ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ನಡುವೆ ಮೈತ್ರಿ ಬಂಧ ರಚನೆಯಾಗಿತ್ತು. ಕಳೆದ 15 ವರ್ಷಗಳಿಂದ ಉಭಯ ಪಕ್ಷಗಳು ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಹಂಚಿಕೊಂಡಿದ್ದವು. ಕೇಂದ್ರದಲ್ಲಿ ಎರಡು ಅವಧಿಗೆ ಆಡಳಿತ ನಡೆಸಿದ ಯುಪಿಎ ಸರ್ಕಾರದಲ್ಲೂ ಎನ್‌ಪಿಸಿ ಅಂಗ ಪಕ್ಷವಾಗಿತ್ತು.

ಇದೀಗ ಮೈತ್ರಿ ಮುರಿದು ಬಿದ್ದ ಬಳಿಕ ಪರಸ್ಪರ ಆರೋಪ–ಪ್ರತ್ಯಾರೋಪಗಳಿಗೆ ಚಾಲನೆ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.