ADVERTISEMENT

19 ಟನ್‌ ಪರಮಾಣು ಇಂಧನ ಖೋತಾ

ಯುರೇನಿಯಂ ಗಣಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2014, 19:30 IST
Last Updated 25 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ಜಾರ್ಖಂಡ್‌­ನಲ್ಲಿ ಎರಡು ಯುರೇನಿಯಂ ಗಣಿಗಳು ಸೆಪ್ಟೆಂಬರ್‌ನಿಂದ ಸ್ಥಗಿತಗೊಂಡಿರು­ವುದ ರಿಂದ 86 ಕೋಟಿ ಯುನಿಟ್‌ ವಿದ್ಯುತ್‌ ಉತ್ಪಾದಿಸಲು ಸಾಕಾಗುತ್ತಿದ್ದ 19 ಟನ್‌ಗೂ ಅಧಿಕ ಪರಮಾಣು ಇಂಧನ ಖೋತಾ ಆಗಿದೆ ಎಂದು ಪರಮಾಣು ಶಕ್ತಿ ಇಲಾಖೆಯ (ಡಿಎಇ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂರೈಕೆ ಮತ್ತು ಬೇಡಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವ ಸಲು­ವಾಗಿ ಇತರೆ ಗಣಿಗಳಿಂದ ಉತ್ಪಾದನೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳ­ಲಾಗಿದೆ. ಆದರೆ ಈ ಗಣಿಗಳಲ್ಲಿ ದೊರಕುತ್ತಿರುವ ಕಡಿಮೆ ಗುಣಮಟ್ಟದ ಅದಿರಿನಿಂದಾಗಿ ಉತ್ಪಾದನಾ ನಷ್ಟ ಮತ್ತಷ್ಟು ಹೆಚ್ಚಳವಾಗಿದೆ. ಜಾರ್ಖಂಡ್‌­ನಲ್ಲಿರುವ ಮೌಲ್ಡಿಹ್, ನರ್ವಾಪಹರ್, ತುರ್ಮುದಿಹ್, ಬಂಧುರಂಗ ಮತ್ತು ಬಗ್ಜಾತಾಗಳಲ್ಲಿನ ಗಣಿಗಳಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಡಿಎಇ ಅಡಿಯಲ್ಲಿ ಜಾಡುಗುಡ ಮತ್ತು ಭಾಟಿನ್‌ಗಳಲ್ಲಿ ಭಾರತೀಯ ಯುರೇನಿಯಂ ಕಾರ್ಪೊರೇಷನ್‌ ನಡೆ­ಸು­ತ್ತಿದ್ದ ಯುರೇನಿಯಂ ಅದಿರು ಗಣಿ­ಗಾರಿಕೆ ಸೆಪ್ಟೆಂಬರ್‌ನಿಂದ ತಾತ್ಕಾಲಿಕ­ವಾಗಿ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.