ADVERTISEMENT

2 ಸಾವಿರ ಟನ್‌ ಈರುಳ್ಳಿ ಆಮದು

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
2 ಸಾವಿರ ಟನ್‌ ಈರುಳ್ಳಿ ಆಮದು
2 ಸಾವಿರ ಟನ್‌ ಈರುಳ್ಳಿ ಆಮದು   

ನವದೆಹಲಿ: ಪೂರೈಕೆ ಹೆಚ್ಚಿಸಿ, ಬೆಲೆ ಏರಿಕೆಗೆ ಕಡಿವಾಣ ಹಾಕಲು ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಸದ್ಯದಲ್ಲೇ ಎರಡು ಸಾವಿರ ಟನ್‌ಗಳಷ್ಟು ಈರುಳ್ಳಿ ಆಮದು ಮಾಡಿಕೊಳ್ಳಲಿದೆ.

‘ಇದಕ್ಕೆ ಪೂರಕವಾಗಿ ನಾಫೆಡ್‌ ಮತ್ತು ‘ಎಸ್‌ಎಫ್‌ಎಸಿ’, ಸ್ಥಳೀಯವಾಗಿ ಬೆಳೆಗಾರರಿಂದ ಒಟ್ಟು 12 ಸಾವಿರ ಟನ್‌ ಈರುಳ್ಳಿ ಖರೀದಿಸಲಿವೆ. ಈರುಳ್ಳಿ ರಫ್ತಿಗೆ ಕಡಿವಾಣ ಹಾಕಲು ಪ್ರತಿ ಟನ್‌ಗೆ  ₹ 45,500 ರಂತೆ ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ಮರಳಿ ಜಾರಿಗೆ ತರಲು ವಾಣಿಜ್ಯ ಸಚಿವಾಲಯಕ್ಕೆ ಕೇಳಿಕೊಳ್ಳಲಾಗಿದೆ’ ಎಂದು ಆಹಾರ ಮತ್ತು ಗ್ರಾಹಕರ ವ್ಯವಹಾರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.

‘ಬೆಳೆಗಾರರಿಂದ ನೇರವಾಗಿ ಖರೀದಿಸಿ ಮಾರುಕಟ್ಟೆಗೆ ಪೂರೈಸುವ ಉದ್ದೇಶಕ್ಕೆ 10 ಸಾವಿರ ಟನ್‌ ಈರುಳ್ಳಿ ಖರೀದಿಸಲು ಭಾರತದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ (ನಾಫೆಡ್‌) ಮತ್ತು 2 ಸಾವಿರ ಟನ್‌ ಖರೀದಿಸಲು ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟಕ್ಕೆ (ಎಸ್‌ಎಫ್‌ಎಸಿ) ಕೇಳಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಆಗಸ್ಟ್‌ ತಿಂಗಳಿನಿಂದೀಚೆಗೆ ದೇಶದಾದ್ಯಂತ ಈರುಳ್ಳಿ ಬೆಲೆ ಏರುಗತಿಯಲ್ಲಿ ಇದೆ. ಪೂರೈಕೆ ಕೊರತೆಯಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಈಗ ಬೆಲೆಯು ಪ್ರತಿ ಕೆಜಿಗೆ ₹ 50 ರಿಂದ 65ರ ದರದಲ್ಲಿ ಮಾರಾಟ ಆಗುತ್ತಿದೆ. ಹೆಚ್ಚಿದ ಬೇಡಿಕೆ ಪೂರೈಸಲು ಖಾಸಗಿ ವರ್ತಕರು ಈಗಾಗಲೇ 11,400 ಟನ್‌ ಆಮದು ಮಾಡಿಕೊಂಡಿದ್ದಾರೆ.

ಈ ಬಾರಿ ಈರುಳ್ಳಿ ಬಿತ್ತನೆ ಶೇ 30ರಷ್ಟು ಕಡಿಮೆ ಇರುವುದರಿಂದ ಹೊಸ ಫಸಲು ಶೇ 10ರಷ್ಟು ಕಡಿಮೆ ಇರುವ ಸಾಧ್ಯತೆ ಇದೆ.

ಈ ಚಿತ್ರಣ ಇನ್ನೂ ಸ್ಪಷ್ಟಗೊಳ್ಳಬೇಕಾಗಿದೆ. ದೇಶದ ಒಟ್ಟು ಈರುಳ್ಳಿ ಉತ್ಪಾದ ನೆಯಲ್ಲಿ ಮುಂಗಾರಿನ ಕೊಡುಗೆಶೇ 40ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.