ADVERTISEMENT

2015ರ ವಿಶ್ವಕಪ್‌ಗೂ ಸಚಿನ್‌ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 9:07 IST
Last Updated 22 ಡಿಸೆಂಬರ್ 2014, 9:07 IST

ದುಬೈ (ಪಿಟಿಐ): ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್ ಅವರು ಮುಂಬರುವ 2015ರ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯ ರಾಯಭಾರಿಯಾಗಿ ಸೋಮವಾರ ನೇಮಕಗೊಂಡಿದ್ದಾರೆ. ಸಚಿನ್ ವಿಶ್ವಕಪ್‌ ರಾಯಭಾರಿ ಆಗುತ್ತಿರುವುದು ಇದು ಸತತ ಎರಡನೇ ಬಾರಿಗೆ.

‘ಸಚಿನ್‌ ತೆಂಡೂಲ್ಕರ್ ಅವರನ್ನು 2015 ವಿಶ್ವಕಪ್‌ ರಾಯಭಾರಿಯಾಗಿ ಸೋಮವಾರ ನೇಮಿಸಲಾಗಿದೆ. ಸಚಿನ್‌ ಅವರು ವಿಶ್ವಕಪ್‌ ರಾಯಭಾರಿಯಾಗುತ್ತಿರುವುದು ಸತತವಾಗಿ ಇದು ಎರಡನೇ ಬಾರಿ. ಈ ಮೊದಲು 2011ರ ವಿಶ್ವಕಪ್‌ ಟೂರ್ನಿಗೆ ಸಚಿನ್‌ ಅವರು ರಾಯಭಾರಿಯಾಗಿದ್ದರು’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ರಾಯಭಾರಿ ಹೊಣೆಗಾರಿಕೆಯ ಭಾಗವಾಗಿ ಸಚಿನ್ ಅವರು, ಟೂರ್ನಿಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಐಸಿಸಿ ಕೈಗೊಳ್ಳುವ ನಿರ್ಧಾರಗಳನ್ನು ಬೆಂಬಲಿಸುವ ಹಾಗೂ ಅದರ ಬಗ್ಗೆ ಪ್ರಚಾರ ನಡೆಸಲಿದ್ದಾರೆ.

ADVERTISEMENT

2015ರ ಫೆಬ್ರುವರಿ 14ರಿಂದ ಮಾರ್ಚ್‌ 29ರ ವರೆಗೆ ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯದಲ್ಲಿ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.