ADVERTISEMENT

216 ಕೋಟಿ ಆಸ್ತಿ ವಶ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಹೈದರಾಬಾದ್‌ (ಪಿಟಿಐ): ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಅವರ ಅಕ್ರಮ ಆಸ್ತಿ ಸಂಗ್ರಹ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಆಂಧ್ರ ಪ್ರದೇಶ ಮೂಲದ ಮೂಲಸೌಕರ್ಯ ಕಂಪೆನಿಯೊಂದರ ₨216 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ.

ವಿಶಾಖಪಟ್ಟಣದ ಜವಾಹರಲಾಲ ನೆಹರೂ ಫಾರ್ಮಾ ಸಿಟಿಯಲ್ಲಿ ಹಸಿರು ವಲಯವನ್ನು 250 ಮೀಟರ್‌ನಿಂದ 50 ಮೀಟರ್‌ಗೆ ಇಳಿಸಿ ಮೆ. ರಾಮ್ಕಿ ಫಾರ್ಮಾ ಸಿಟಿ ಇಂಡಿಯಾ ಲಿ.ಗೆ (ಆರ್‌ಪಿಸಿಐಎಲ್‌) ಕಾನೂನುಬಾಹಿರವಾಗಿ 914 ಎಕರೆ ಜಮೀನು ನೀಡಲಾಗಿದೆ.

ಇದಕ್ಕೆ ಪ್ರತಿಫಲವಾಗಿ ಆರ್‌ಪಿಸಿಐಎಲ್‌ ಜಗನ್‌ ಅವರ ಮಾಲೀಕತ್ವದ ಜಗತಿ ಪಬ್ಲಿಕೇಷನ್‌ ಪ್ರೈ. ಲಿ. ಸಂಸ್ಥೆಯಲ್ಲಿ ₨ 10 ಕೋಟಿ ಹೂಡಿಕೆ ಮಾಡಿದೆ ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಆರೋಪ ಮಾಡಿದೆ. ಈ ಅಕ್ರಮ ನಡೆದಾಗ ಜಗನ್‌ ಅವರ ತಂದೆ ವೈ.ಎಸ್‌. ರಾಜಶೇಖರ ರೆಡ್ಡಿ ಅವರು ಆಂಧ್ರದ ಮುಖ್ಯಮಂತ್ರಿಯಾಗಿದ್ದರು.

ಆಂಧ್ರಪ್ರದೇಶದ ವಿವಿಧ ಸ್ಥಳಗಳಲ್ಲಿ ಆರ್‌ಪಿಸಿಐಎಲ್‌ನ ಮಾಲೀಕತ್ವದ ಜಮೀನುಗಳನ್ನು ವಶಕ್ಕೆ ಪಡಡಯಲಾಗಿದೆ. ಹಾಗೆಯೇ ಜಗನ್‌ ಅವರ ಜಗತಿ ಪಬ್ಲಿಕೇಷನ್ಸ್‌ನ ₨ 10 ಕೋಟಿ ಮೌಲ್ಯದ ಷೇರುಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.