ADVERTISEMENT

3ನೇ ದಿನವೂ ಮುಂದುವರಿದ ಐಟಿ ಶೋಧ

ಜಯಾ ಆಪ್ತೆ ಶಶಿಕಲಾ ಮತ್ತು ಸಂಬಂಧಿಕರ ನಿವಾಸ

ಪಿಟಿಐ
Published 11 ನವೆಂಬರ್ 2017, 19:30 IST
Last Updated 11 ನವೆಂಬರ್ 2017, 19:30 IST

ಚೆನ್ನೈ/ಕಡಲೂರ್‌: ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಆಪ್ತೆ ಹಾಗೂ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಮತ್ತು ಅವರ ಸಂಬಂಧಿಕರ ಮನೆ ಹಾಗೂ ಇತರ ಸ್ಥಳಗಳಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ನಡೆಸಿರುವ ತಪಾಸಣೆ ಸತತ ಮೂರನೇ ದಿನವಾದ ಶನಿವಾರವೂ ಮುಂದುವರಿದಿದೆ.

ಶೋಧದ ವೇಳೆ ವಶಪಡಿಸಿಕೊಂಡ ನಗದು ಹಾಗೂ ಇತರ ದಾಖಲೆಗಳ ಬಗ್ಗೆ ಅವರು ಮಾಹಿತಿ ನೀಡಿಲ್ಲ.

ಬೆಂಗಳೂರು, ಹೈದರಾಬಾದ್‌ ಸೇರಿದಂತೆ ಹಲವು ಕಡೆಗಳಲ್ಲಿ ಇದೇ 9ರಿಂದ  1000 ಅಧಿಕಾರಿಗಳ ಕೆಲವು ತಂಡಗಳು 187 ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದಾರೆ.

ADVERTISEMENT

‌ಕಡಲೂರಿನಲ್ಲಿ ಎರಡು ಮನೆಗಳು ಹಾಗೂ ಒಂದು ಚಿನ್ನದ ಅಂಗಡಿಯಲ್ಲಿ 10 ಅಧಿಕಾರಿಗಳು ತಪಾಸಣೆ ಮುಂದುವರಿಸಿದ್ದಾರೆ.ಎರಡು ಮನೆಗಳಲ್ಲಿ ಒಂದು ಶಶಿಕಲಾ ಅವರ ಜ್ಯೋತಿಷಿಗೆ ಸೇರಿದೆ.

ಹಣಕಾಸು ಸಚಿವಾಲಯದ ಆರ್ಥಿಕ ಗುಪ್ತಚರ ಘಟಕ ನೀಡಿರುವ ಮಾಹಿತಿ ಹಾಗೂ ಸಂಗ್ರಹಿಸಿರುವ ವಿವರಗಳ ಆಧಾರದಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ತೆರಿಗೆ ವಂಚಿಸುವುದಕ್ಕಾಗಿ ನಕಲಿ ಕಂಪೆನಿಗಳ ಸ್ಥಾಪನೆ, ಸಂಶಯಾಸ್ಪದ ಬಂಡವಾಳ ಹೂಡಿಕೆ,ಅಕ್ರಮ ಹಣ ವರ್ಗಾವಣೆ, ನಕಲಿ ಖಾತೆ ಹೊಂದಿರುವ ಆರೋಪಗಳನ್ನು ಶಶಿಕಲಾ ವಿರುದ್ಧ ಹೊರಿಸಲಾಗಿದೆ.

ಪಿತೂರಿ: ‘ಇದೊಂದು ಪಿತೂರಿಯಾಗಿದ್ದು, ನನ್ನನ್ನು ಮತ್ತು ಶಶಿಕಲಾ ಅವರನ್ನು ರಾಜಕಾರಣದಿಂದ ಹೊರಹಾಕಲು ಶೋಧ  ನಡೆಸಲಾಗಿದೆ’ ಎಂದು ಎಐಎಡಿಎಂಕೆ ಮುಖಂಡ ಟಿ.ಟಿ.ವಿ. ದಿನಕರನ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.