ADVERTISEMENT

3.5 ಲಕ್ಷಕ್ಕಿಂತ ಹೆಚ್ಚು ಮಂದಿಯಿಂದ ರಾಷ್ಟ್ರಗೀತೆ ಗಾಯನ; ಗಿನ್ನಿಸ್ ದಾಖಲೆ

ಪಿಟಿಐ
Published 21 ಜನವರಿ 2017, 14:31 IST
Last Updated 21 ಜನವರಿ 2017, 14:31 IST
3.5 ಲಕ್ಷಕ್ಕಿಂತ ಹೆಚ್ಚು ಮಂದಿಯಿಂದ ರಾಷ್ಟ್ರಗೀತೆ ಗಾಯನ; ಗಿನ್ನಿಸ್ ದಾಖಲೆ
3.5 ಲಕ್ಷಕ್ಕಿಂತ ಹೆಚ್ಚು ಮಂದಿಯಿಂದ ರಾಷ್ಟ್ರಗೀತೆ ಗಾಯನ; ಗಿನ್ನಿಸ್ ದಾಖಲೆ   

ರಾಜ್‍ಕೋಟ್: ಗುಜರಾತ್‍ನ ರಾಜ್‍ಕೋಟ್ ಜಿಲ್ಲೆಯ ಕಾಗ್‍ವಾಡ್ ಎಂಬಲ್ಲಿ 3.5 ಲಕ್ಷಕ್ಕಿಂತ ಹೆಚ್ಚು ಮಂದಿ ಒಟ್ಟಿಗೆ ರಾಷ್ಟ್ರಗೀತೆ ಹಾಡಿದ್ದು, ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ.

ಇಲ್ಲಿನ ಖೊಡಾಲ್ ಧಾಮ್ ದೇವಸ್ಥಾನದಲ್ಲಿ ಖೋಡಿಯಾರ್ ದೇವರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ  3.5 ಲಕ್ಷಕ್ಕಿಂತ ಹೆಚ್ಚು ಮಂದಿ ರಾಷ್ಟ್ರಗೀತೆಯನ್ನು ಹಾಡಿ ಗಿನ್ನಿಸ್ ದಾಖಲೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಖೊಡಾಲ್ ಧಾಮ್ ದೇವಾಲಯ ಟ್ರಸ್ಟ್ ಸದಸ್ಯ ಹಂಸರಾಜ್ ಗಜೇರಾ ಹೇಳಿದ್ದಾರೆ.

2014ರಲ್ಲಿ ಬಾಂಗ್ಲಾದೇಶದಲ್ಲಿ  2,54,537 ಮಂದಿ ಏಕಕಂಠವಾಗಿ ರಾಷ್ಟ್ರಗೀತೆ ಹಾಡಿ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ನಾವು ಮುರಿದಿದ್ದೇನೆ ಎಂದು ಗಜೇರಾ ಹೇಳಿದ್ದಾರೆ.

ADVERTISEMENT

ಗಿನ್ನಿಸ್ ವಿಶ್ವ ದಾಖಲೆಯ ಅಧಿಕಾರಿಗಳಿಂದ ನಮಗೆ ಪ್ರಮಾಣಪತ್ರ ಲಭಿಸಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ 1008 ಕುಂಡಗಳ ಮಹಾಯಜ್ಞ ಮತ್ತು 40ಕಿಮೀಗಳ ಶೋಭಯಾತ್ರೆ ಆಯೋಜಿಸಿ ಇದೇ ಟ್ರಸ್ಟ್ ಲಿಮ್ಕಾ ದಾಖಲೆ ಬರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.