ADVERTISEMENT

ಜೆಕೆಎಲ್‌ಎಫ್ ಅಧ್ಯಕ್ಷ ಯಾಸಿನ್ ಮಲಿಕ್ ಬಂಧನ

ಪಿಟಿಐ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST

ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್‌) ಅಧ್ಯಕ್ಷ ಮೊಹಮ್ಮದ್ ಯಾಸಿನ್ ಮಲಿಕ್‌ ಅವರನ್ನು ಬುಧವಾರ ಬಂಧಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಪೊಲೀಸರು ಅಬಿ ಗುಜರ್‌ನಲ್ಲಿರುವ ಜೆಕೆಎಲ್‌ಎಫ್ ಕಚೇರಿಯಿಂದ ಬಂಧಿಸಿ ಕರೆದೊಯ್ಯುವ ಮೊದಲು ಆಡಳಿತಾರೂಢ ಪಿಡಿಪಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮತ್ತೊಂದು ಬೆಳವಣಿಗೆಯಲ್ಲಿ, ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಮುಖ್ಯಸ್ಥ ಮಿರ್ವಾಯಿಜ್ ಉಮರ್ ಫಾರೂಕ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಆದರೆ ಪೊಲೀಸರು ಇದಕ್ಕೆ ಕಾರಣ ತಿಳಿಸಿಲ್ಲ.

ADVERTISEMENT

ಈ ಮಧ್ಯೆ ಮಲಿಕ್, ಮಿರ್ವಾಯಿಜ್ ಹಾಗೂ ಸೈಯದ್ ಅಲಿ ಷಾ ಗಿಲಾನಿ ಅವರನ್ನೊಳಗೊಂಡ ಪ್ರತ್ಯೇಕತಾವಾದಿಗಳು ಉತ್ತರ ಕಾಶ್ಮೀರದ ಸೊಪೊರ್ ಪಟ್ಟಣದಲ್ಲಿ ಜನವರಿ 6ರಂದು ಬಂದ್‌ಗೆ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.