ADVERTISEMENT

ಹಜ್ ಯಾತ್ರೆಗೆ ಸಹಾಯಧನ ಇಲ್ಲ

ಪಿಟಿಐ
Published 16 ಜನವರಿ 2018, 20:04 IST
Last Updated 16 ಜನವರಿ 2018, 20:04 IST
ಹಜ್ ಯಾತ್ರೆಗೆ ಸಹಾಯಧನ ಇಲ್ಲ
ಹಜ್ ಯಾತ್ರೆಗೆ ಸಹಾಯಧನ ಇಲ್ಲ   

ನವದೆಹಲಿ : ಹಜ್ ಯಾತ್ರೆಗೆ ನೀಡುವ ಸಹಾಯಧನವನ್ನು ಈ ವರ್ಷದಿಂದ ನಿಷೇಧಿಸಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ತಿಳಿಸಿದ್ದಾರೆ.

‘ಸಹಾಯಧನ ನೀಡದಿದ್ದರೂ ಭಾರತದಿಂದ ಈ ವರ್ಷ 1.75 ಲಕ್ಷ ಮುಸ್ಲಿಮರು ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಇದು ಈವರೆಗಿನ ದಾಖಲೆ’ ಎಂದು ಅವರು ಹೇಳಿದ್ದಾರೆ.

‘ಭಾರತದಿಂದ ಹಡಗುಗಳ ಮೂಲಕ ಬರುವ ಯಾತ್ರಿಗಳಿಗೂ ಪ್ರವೇಶಕ್ಕೆ ಅವಕಾಶ ನೀಡಲು ಸೌದಿ ಅರೇಬಿಯಾ ಸರ್ಕಾರ ಒಪ್ಪಿಕೊಂಡಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಹಜ್ ಯಾತ್ರೆಗೆ ಸಹಾಯಧನ ನೀಡುವುದನ್ನು ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು 2012ರಲ್ಲಿ ನಿರ್ದೇಶಿಸಿತ್ತು. ಹೊಸ ಸಮಿತಿಯ ಶಿಫಾರಸಿನಂತೆ ಸಹಾಯಧನ ನೀಡದಿರಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.