ADVERTISEMENT

’ಪದ್ಮಾವತ್‌’ ಚಿತ್ರ ತಡೆ ಅರ್ಜಿ ವಜಾ; ಸಿನಿಮಾ ಬಿಡುಗಡೆ ಆದೇಶ ಪಾಲನೆಗೆ ಸುಪ್ರೀಂ ತಾಕೀತು

ಏಜೆನ್ಸೀಸ್
Published 23 ಜನವರಿ 2018, 7:12 IST
Last Updated 23 ಜನವರಿ 2018, 7:12 IST
’ಪದ್ಮಾವತ್‌’ ಚಿತ್ರ ತಡೆ ಅರ್ಜಿ ವಜಾ; ಸಿನಿಮಾ ಬಿಡುಗಡೆ ಆದೇಶ ಪಾಲನೆಗೆ ಸುಪ್ರೀಂ ತಾಕೀತು
’ಪದ್ಮಾವತ್‌’ ಚಿತ್ರ ತಡೆ ಅರ್ಜಿ ವಜಾ; ಸಿನಿಮಾ ಬಿಡುಗಡೆ ಆದೇಶ ಪಾಲನೆಗೆ ಸುಪ್ರೀಂ ತಾಕೀತು   

ನವದೆಹಲಿ: ‘ಪದ್ಮಾವತ್‌’ ಚಿತ್ರ ಆದೇಶ ವಾಪಸ್‌ ಪಡೆಯುವಂತೆ ಕೋರಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ಸರ್ಕಾರಗಳು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ.

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ’ಪದ್ಮಾವತ್‌’ ಚಿತ್ರವನ್ನು ಜ.25ರಂದು ಬಿಡುಗಡೆ ಮಾಡಲು ಸಮ್ಮತಿಸಿ ಜ.18ರಂದು ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

‘ಚಿತ್ರವು ಸೆನ್ಸಾರ್‌ ಮಂಡಳಿಯ ಪ್ರಮಾಣಪತ್ರ ಪಡೆದಿದೆ ಹಾಗೂ ಕೋರ್ಟ್‌ ಆದೇಶವೂ ಇದೆ ಎಂಬುದನ್ನು ಸರ್ಕಾರಗಳು ಮತ್ತು ಜನರು ಗಮನಿಸಬೇಕು. ಸುಪ್ರೀಂ ಕೋರ್ಟ್‌ ಆದೇಶಕ್ಕೆ ಬದ್ಧರಾಗಿರುವುದು ಉತ್ತಮ. ನಿಮಗೆ ಬೇಡವಾದರೆ ಸಿನಿಮಾ ವೀಕ್ಷಿಸಬೇಡಿ. ಆದರೆ, ಚಿತ್ರ ಪ್ರದರ್ಶನದ ಮೇಲೆ ನಿಷೇಧ ಹೇರುವುದಿಲ್ಲ’ ಎಂದು ಕೋರ್ಟ್‌ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.