ADVERTISEMENT

ವಿಶ್ವವಿದ್ಯಾಲಯ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಂಕ್‌ ಫುಡ್ ಮಾರಾಟ ನಿಷೇಧ

ಯುಜಿಸಿ ನಿರ್ದೇಶನ

ಪಿಟಿಐ
Published 22 ಆಗಸ್ಟ್ 2018, 19:30 IST
Last Updated 22 ಆಗಸ್ಟ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ’ಜಂಕ್‌ ಫುಡ್‌’ ಮಾರಾಟ ನಿಷೇಧಿಸಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿರ್ದೇಶನ ನೀಡಿದೆ.

ಕಾಲೇಜುಗಳಲ್ಲಿ ‘ಜಂಕ್‌ ಫುಡ್‌’ ಮಾರಾಟ ನಿಷೇಧಿಸುವುದರಿಂದ ಉತ್ತಮ ಆಹಾರ ಸೇವಿಸುವ ಪದ್ಧತಿ ಅನುಸರಿಸಲು ಅನುಕೂಲವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಸ್ಥೂಲಕಾಯರಾಗುವುದನ್ನು ತಪ್ಪಿಸಬಹುದು. ಕಲಿಕೆ ಹಾಗೂ ಉತ್ತಮ ಜೀವನಶೈಲಿಗೂ ಇದು ಸಹಕಾರಿಯಾಗುತ್ತದೆ ಎಂದು ಯುಜಿಸಿ ತಿಳಿಸಿದೆ.

’ಜಂಕ್‌ ಫುಡ್‌’ ಮಾರಾಟ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ವಿದ್ಯಾರ್ಥಿಗಳಿಗೂ ’ಜಂಕ್‌ ಫುಡ್‌’ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ವಿಶ್ವವಿದ್ಯಾಲಯಗಳಿಗೆ ಯುಜಿಸಿ ಕಳುಹಿಸಿರುವ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.