ADVERTISEMENT

ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುವೆ: ಖಮರುಲ್‌

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2014, 20:05 IST
Last Updated 20 ಡಿಸೆಂಬರ್ 2014, 20:05 IST

ಹುಬ್ಬಳ್ಳಿ: ‘ವಕ್ಫ್‌ ಮಂಡಳಿಗೆ ಸೇರಿದ ಒಂದಿಂಚು ಭೂಮಿಯನ್ನು ನಾನು ಕಬಳಿಸಿರುವುದು ಸಾಬೀತಾದರೆ ನೇಣು ಹಾಕಿಕೊಳ್ಳಲು ಸಿದ್ಧ’ ಎಂದು ವಕ್ಫ್‌ ಹಾಗೂ ಅಲ್ಪಸಂಖ್ಯಾತ ಸಚಿವ ಖಮರುಲ್‌ ಇಸ್ಲಾಂ ಸವಾಲು ಹಾಕಿದರು.

‘ಮಂಡಳಿಗೆ ಸೇರಿದ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಬೇಕಿದ್ದರೆ ಈ ಬಗ್ಗೆ ಅಫಿಡವಿಟ್‌ ನೀಡುತ್ತೇನೆ. ಒಂದು ವೇಳೆ ಆರೋಪ ಸಾಬೀತಾದಲ್ಲಿ ನೇಣು ಹಾಕಿಕೊಂಡು ಸಾಯುತ್ತೇನೆ. ಅದು ಸುಳ್ಳಾದಲ್ಲಿ ಆರೋಪ ಮಾಡುವವರು ನೇಣು ಹಾಕಿಕೊಳ್ಳುತ್ತಾರೆಯೇ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ವಕ್ಫ್‌ ಆಸ್ತಿ ಅತಿಕ್ರಮಣ ಕುರಿತು ಡಿ.ವಿ.ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ವರದಿ ನೀಡಿದ್ದೆ. ಆದರೆ ಕ್ರಮ ಜರುಗಿಸಲಿಲ್ಲ. ಈಗ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.