ADVERTISEMENT

ಉತ್ತರ ಪತ್ರಿಕೆಯಲ್ಲಿ ಚಿಕನ್‌ ಸಾಂಬಾರ್!

ಸೂರ್ಯನಾರಾಯಣ ವಿ
Published 28 ಏಪ್ರಿಲ್ 2015, 19:42 IST
Last Updated 28 ಏಪ್ರಿಲ್ 2015, 19:42 IST

ಬೆಂಗಳೂರು: ‘ನಾನು ಭಾನುವಾರು ನಾಮ್ಮ ಮನೆಯಲ್ಲಿ 1 ಕೆಜಿ ಚಿಕನ್‌ ತಂದು ಸಂಬಾರ್‌ ಮಾಡಿದರು. ಆ ಚಿಕನ್‌ ಸಂಬಾರ್‌ ತುಂಬಾ ರುಚಿಯಾಗಿತು ಚಿಕನ್‌ ಮಾಂಸ ತುಂಬಾ ಚೆನ್ನಾಗಿತ್ತು ಚಿಕನ್‌ ಬೇಕಾಗಿರು ಪದಾರ್ಥಗಳು ಮೊದಲು ಶುಂಠಿ, ಲವಂಗ, ಮೈತ್ಯಾ ಚಿಕನ್‌ ಮಾಸಲ ಮತ್ತು ಈರುಳ್ಳಿ ಇವುಗಳನ್ನು ಮಿಸ್ಕಿಗೆ ಹಾಕ್ಕಿ ಚೆನ್ನಾಗಿ ರುಂಬಿಕೊಳ್ಳಬೇಕು ಆನಂತರ ಪತ್ರೆಗೆ, ಹೆಣ್ಣೆ ಈರುಳ್ಳಿ. ರುಂಬಿ ಕೊಂಡ್ಡ ಮಾಸಲ ಹಾಕ್ಕಿ ಚೆನ್ನಾ ಮಿಸ್‌ ಮಾಡಿಕೊಳ್ಳ ಬೇಕು. ಆನಂತರ ಚಿಕ್ಕನನ್ನು ಪತ್ರೆಗೆ ಹಾಕ್ಕಿ ಚೆನ್ನಾ ಬೇಹಿಸಿಕೋಳ್ಳ ಬೇಕು. ಆನಂತರ ಸಂಬಾರ್‌  ತುಂಬು ರುಚಿಯಾಗಿದೆ.’

– ಈ ಬಾರಿಯ  ಎಸ್ಸೆಸ್ಸೆಲ್ಸಿ ಗಣಿತ  ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ವಿದ್ಯಾರ್ಥಿಯೊಬ್ಬ ನೀಡಿದ ಉತ್ತರದ ಶೈಲಿ ಇದು!
ಇದು ಒಂದು ಉದಾಹರಣೆಯಷ್ಟೆ. ಇಂತಹುದೇ ತಲೆ ಹರಟೆಯ ಮೂರು ನಾಲ್ಕು ಉತ್ತರಗಳು ಈ ಬಾರಿಯ ಉತ್ತರ ಪತ್ರಿಕೆಗಳಲ್ಲಿ ಕಂಡುಬಂದಿದೆ.

ಜಾಲತಾಣದಲ್ಲಿ: ಈ ಉತ್ತರಗಳೆಲ್ಲ ಈಗ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣ ಮತ್ತು ವಾಟ್ಸ್‌ ಆ್ಯಪ್‌ಗಳಲ್ಲಿ ಹರಿದಾಡುತ್ತಿವೆ.

*
ನಿಯಮಗಳ ಪ್ರಕಾರ, ಅಂಕಗಳು ಪ್ರಕಟಗೊಳ್ಳುವವರೆಗೆ  ಉತ್ತರ ಪತ್ರಿಕೆಗಳನ್ನು ಬಹಿರಂಗಗೊಳಿಸುವಂತಿಲ್ಲ. ಅದಕ್ಕೂ ಮೊದಲು ಬಹಿರಂಗಗೊಂಡರೆ ಅದು ತಪ್ಪಾಗುತ್ತದೆ

-ಯಶೋದಾ ಬೋಪಣ್ಣ, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT