ADVERTISEMENT

ಉನ್ನತ ಅಧ್ಯಯನಕ್ಕೆ 12 ವರ್ಷದ ಬೌದ್ಧ ಬಿಕ್ಕು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಬೌದ್ಧ ಮಂದಿರ ಸೇರ್ಪಡೆಯಾದ 12 ವರ್ಷದ ಬಿಕ್ಕು ತೆಂಜಿನ್ ನಾಗವಾಂಗ್ ಜಿಗ್ಮೆ ವಾಂಗಚುಕ್
ಬೌದ್ಧ ಮಂದಿರ ಸೇರ್ಪಡೆಯಾದ 12 ವರ್ಷದ ಬಿಕ್ಕು ತೆಂಜಿನ್ ನಾಗವಾಂಗ್ ಜಿಗ್ಮೆ ವಾಂಗಚುಕ್   

ಮುಂಡಗೋಡ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಟಿಬೆಟನ್ನರ ಲಾಮಾ ಕ್ಯಾಂಪ್ ನಂ.2ರ ಲೋಸಲಿಂಗ್ ಬೌದ್ಧ ಮಂದಿರದ 12 ವರ್ಷದ ಬೌದ್ಧ ಬಿಕ್ಕು ತೆಂಜಿನ್ ನಾಗವಾಂಗ್ ಜಿಗ್ಮೆ ವಾಂಗಚುಕ್ ಸಹಸ್ರಾರು ಬೌದ್ಧ ಬಿಕ್ಕುಗಳ ಸಮ್ಮುಖದಲ್ಲಿ ಉನ್ನತ ಅಧ್ಯಯನಕ್ಕಾಗಿ ಗುರುವಾರ ಬೌದ್ಧ ಮಂದಿರ ಸೇರ್ಪಡೆಯಾದರು.

2005ರಲ್ಲಿ ಲಡಾಕ್‌ನಲ್ಲಿ ಜನಿಸಿದ ತೆಂಜಿನ್, 19ನೇ ಬಕುಲಾ ರಿನ್‌ಪೋಚೆಯ ಪುನರ್ಜನ್ಮ ಎಂದು ಟಿಬೆಟನ್ನರು ನಂಬಿದ್ದಾರೆ. ಅಂದಿನಿಂದ ಬೌದ್ಧ ಅನುಯಾಯಿಗಳು ವಿಶೇಷ ಆಸಕ್ತಿ, ಭಕ್ತಿಯಿಂದ ನೋಡುತ್ತಿದ್ದ ತೆಂಜಿನ್‌,  ಇಲ್ಲಿನ ಮೊನ್ಯಾಸ್ಟ್ರಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದರು. 12ನೇ ವಯಸ್ಸಿಗೇ ಬೌದ್ಧ ಪಂಡಿತರ ಸರಿಸಮ ಕುಳಿತುಕೊಳ್ಳುವ ಯೋಗ ಪಡೆದುಕೊಂಡಿದ್ದಾರೆ ಎಂದು ಬೌದ್ಧ ಮಂದಿರದ ಮುಖಂಡ ಕೊಂಚೊಕ್‌ ನಂದಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜಮ್ಮು ಕಾಶ್ಮೀರದ ಲೇಹ್‌, ಲಡಾಕ್‌ನಿಂದ ಬಂದಿದ್ದ ಬೌದ್ಧ ಅನುಯಾಯಿಗಳು, ಸ್ಥಳೀಯ ಲೋಸಲಿಂಗ್‌ ಬೌದ್ಧ ಮಂದಿರದ ಬಿಕ್ಕುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.