ADVERTISEMENT

ಎಚ್‌.ವಿಶ್ವನಾಥ್‌ ಜೆಡಿಎಸ್‌ ಗೆ?

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST

ಬೆಂಗಳೂರು: ಕಾಂಗ್ರೆಸ್‌ ನಾಯಕ ಅಡಗೂರು ಎಚ್. ವಿಶ್ವನಾಥ್‌ ಜೆಡಿಎಸ್‌  ಸೇರುವುದು  ಖಚಿತವಾಗಿದೆ.

ಈ  ಕುರಿತು  ಔಪಚಾರಿಕ ಪ್ರಕಟಣೆ ಅಷ್ಟೇ ಬಾಕಿ ಉಳಿದಿದೆ.  ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರ ಸ್ವಾಮಿ  ಶನಿವಾರ ರಾತ್ರಿ ನಗರದ ರೆಸಿಡೆನ್ಸಿ ರಸ್ತೆಯ ಹೊಟೇಲ್‌ವೊಂದರಲ್ಲಿ ವಿಶ್ವನಾಥ್‌ ಜತೆ  ಮಾತುಕತೆ ನಡೆಸಿದರು.

ಜೆಡಿಎಸ್‌ ಸೇರ್ಪಡೆ ಮುನ್ನ  ಹಿತೈಷಿಗಳ ಜತೆ ಚರ್ಚೆ ನಡೆಸುವುದಾಗಿ ವಿಶ್ವನಾಥ್‌ ಅವರು ಕುಮಾರಸ್ವಾಮಿಗೆ ತಿಳಿಸಿದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ಹೇಳಿವೆ.

ADVERTISEMENT

‘ಜೆಡಿಎಸ್‌ನಲ್ಲಿ ಗೌರವದಿಂದ ನಡೆಸಿಕೊಳ್ಳಬೇಕು. ಕಾಂಗ್ರೆಸ್‌ನಲ್ಲಿ ಅಗೌರವದಿಂದ ನಡೆಸಿಕೊಂಡಿದ್ದಾರೆ. ಇದರಿಂದ ಸಾಕಷ್ಟು ನೋವು ಅನುಭವಿಸಿದ್ದೇನೆ’ ಎಂದು ವಿಶ್ವನಾಥ್‌ ಹೇಳಿದ್ದಾರೆ.

‘ನಮ್ಮ ಪಕ್ಷದಲ್ಲಿ ಗೌರವದಿಂದ  ನೋಡಿಕೊಳ್ಳುತ್ತೇವೆ. ಮೈಸೂರು ಜಿಲ್ಲೆಯಲ್ಲಿ ನೀವು ಬಯಸಿದ ವಿಧಾನಸಭಾ ಕ್ಷೇತ್ರ ಅಥವಾ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ನೀಡುತ್ತೇವೆ ಎಂದು   ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಇಬ್ಬರೂ ಮಾತುಕತೆ ನಡೆಸಿದ ಸಮಯದಲ್ಲಿ ಕೆ.ಆರ್‌.ನಗರ ಶಾಸಕ ಸಾ.ರಾ.ಮಹೇಶ್‌, ವಿಧಾನಪರಿಷತ್‌ ಸದಸ್ಯ ಚಿಕ್ಕಮಾದು ಇದ್ದರು.

ಮೇ 10 ರಂದು ವಿಶ್ವನಾಥ್‌ ಅವರ  ಹುಟ್ಟು ಹಬ್ಬವಿದ್ದು, ಅಂದು ನಡೆಯುವ ಕಾರ್ಯಕ್ರಮದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಮಾಹಿತಿ ಇಲ್ಲ: ‘ವಿಶ್ವನಾಥ್ ಜೆಡಿಎಸ್ ಸೇರುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಸಿದ್ದರಾಮಯ್ಯ ಶ್ರವಣಬೆಳಗೊಳದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.