ADVERTISEMENT

ಎಸ್ಸೆಸ್ಸೆಲ್ಸಿ: 60 ಶಾಲೆಗಳ ಫಲಿತಾಂಶ ‘0’

​ಪ್ರಜಾವಾಣಿ ವಾರ್ತೆ
Published 12 ಮೇ 2017, 10:47 IST
Last Updated 12 ಮೇ 2017, 10:47 IST
ಎಸ್ಸೆಸ್ಸೆಲ್ಸಿ: 60 ಶಾಲೆಗಳ ಫಲಿತಾಂಶ ‘0’
ಎಸ್ಸೆಸ್ಸೆಲ್ಸಿ: 60 ಶಾಲೆಗಳ ಫಲಿತಾಂಶ ‘0’   

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 8,56,286 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 5,81,134 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 67.87ರಷ್ಟು ಫಲಿತಾಂಶ ಹೊರಬಂದಿದೆ. ಕಳೆದ ವರ್ಷ ಶೇ 75.11ರಷ್ಟು ಫಲಿತಾಂಶ ಬಂದಿತ್ತು. ಒಟ್ಟಾರೆ ಫಲಿತಾಂಶದಲ್ಲಿ ಶೇ 7.24ರಷ್ಟು ಇಳಿಕೆ ಕಂಡಿದ್ದು, ಶೂನ್ಯ ಸಾಧನೆ ಮಾಡಿದ ಶಾಲೆಗಳ ಸಂಖ್ಯೆಯೂ ಹೆ‌ಚ್ಚಿದೆ. ಶೂನ್ಯ ಸಾಧನೆಯಲ್ಲೂ ಶಾಲೆಗಳು ಮುಂದಿವೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಪಡೆದ ಶಾಲೆಗಳು ಸಂಖ್ಯೆ ಏರಿಕೆಯಾಗಿದ್ದು, 2016ರಲ್ಲಿ ಒಟ್ಟು 52 ಇದ್ದ ಸಂಖ್ಯೆ 2017ರಲ್ಲಿ 60ಕ್ಕೆ ತಲುಪಿದೆ.

51 ಅನುದಾನ ರಹಿತ ಶಾಲೆಗಳು ಶೂನ್ಯ ಸಂಪಾದನೆ ಮಾಡಿವೆ. ಕಳೆದ ವರ್ಷ 43 ಇದ್ದ ಈ ಸಂಖ್ಯೆ 51ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಶೂನ್ಯ ಸಂಪಾದನೆ ಮಾಡಿದ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆರಿದೆ.

ADVERTISEMENT

100ಕ್ಕೆ 100 ಫಲಿತಾಂಶ
ಶೇಕಡಾ 100ಕ್ಕೆ 100ರಷ್ಟು ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ. 2016ರಲ್ಲಿ 1563 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿದ್ದವು, 2017ರಲ್ಲಿ ಈ ಸಂಖ್ಯೆ 924ಕ್ಕೆ ಇಳಿದಿದೆ. ಈ ಸಂಖ್ಯೆಗಳ ಅಂತರ 645.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.