ADVERTISEMENT

ಒಂದು ಪಂಚಾಯಿತಿಗೆ ತೆರಿಗೆ, ಮತ್ತೊಂದಕ್ಕೆ ಮತ

ಅತಂತ್ರರಾಗಿರುವ ಸಾವಿರಾರು ಮತದಾರರು

ಬಸವರಾಜ ಹವಾಲ್ದಾರ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಮಂಡ್ಯ: ನಗರಕ್ಕೆ ಹೊಂದಿಕೊಂಡಿರುವ ಬಡಾವಣೆಯಲ್ಲಿ ವಾಸಿಸುತ್ತಿದ್ದರೂ ಗ್ರಾಮ ಪಂಚಾಯಿತಿಗೆ ಸೇರಿದ್ದಾರೆ.  ಮಂಡ್ಯ ತಾಲ್ಲೂಕಿನಲ್ಲಿದ್ದರೂ ಇವರು ಶ್ರೀರಂ ಗಟ್ಟಣ ವಿಧಾನಸಭಾ ಕ್ಷೇತ್ರದ ಮತದಾ ರರು. ಬೇಲೂರು ಗ್ರಾಮ ಪಂಚಾಯಿತಿಗೆ ತೆರಿಗೆ ಕಟ್ಟುತ್ತಾರೆ. ಆದರೆ, ಸಂತಕಸಲಗೆರೆ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೆ ಮತ ಚಲಾಯಿಸುತ್ತಾರೆ.

– ಇದು ಮಂಡ್ಯ ನಗರದ ಹೊರವಲಯದ ಬಡಾವಣೆಗಳಲ್ಲಿರುವ ಕಾವೇರಿನಗರ 2ನೇ ಹಂತ, ದ್ವಾರಕಾ ನಗರ, ಶ್ರೀರಾಮ ನಗರ ಬಡಾವ ಣೆಯಲ್ಲಿನ ಅತಂತ್ರರಾದ ಸಾವಿರಾರು ನಿವಾಸಿಗಳ ಕಥೆ.

ಇವರು ವಾಸಿಸುವ ಪ್ರದೇಶದ ಭೂಮಿಯ ಸರ್ವೆ ನಂಬರ್‌ಗಳು ಗುತ್ತಲಿಗೆ ಸೇರಿಕೊಂಡಿವೆ. ಆ ಗ್ರಾಮವು ಬೇಲೂರು ಗ್ರಾಮ ಪಂಚಾಯಿತಿಗೆ ಬರುವುದರಿಂದ ಅಲ್ಲಿಯೇ ತೆರಿಗೆ, ಕಂದಾಯ, ಮನೆ ನಿರ್ಮಾಣದ ಅನು ಮತಿ ಪಡೆದುಕೊಳ್ಳುತ್ತಾರೆ.

ಇಲ್ಲಿಯವರೆಗೆ ಬೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಇದ್ದರು. ಆ ಬಾರಿ ಚುನಾವಣಾ ವಿಭಾಗದ ಅಧಿಕಾರಿಗಳು ಮಾಡಿದ ಯಡವಟ್ಟಿ ನಿಂದಾಗಿ ಸಂತ ಕಸಲಗೆರೆ ಗ್ರಾಮ ಪಂಚಾ ಯಿತಿಗೆ ಸೇರ್ಪ ಡೆಗೊಂಡಿ ದ್ದಾರೆ. ಈ ಪ್ರದೇಶದಿಂದ ಮೂವರು ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಯಾ ಗಬೇಕಿದೆ.

ಹೊಸ ಬಡಾವಣೆಗಳಾಗಿದ್ದರಿಂದ ಮನೆಗಳ ನಿರ್ಮಾಣ ಕಾರ್ಯ ಜೋರಾ ಗಿಯೇ ನಡೆಯುತ್ತದೆ. ಅದಕ್ಕೆ ಅನುಮ ತಿಯನ್ನು ಬೇಲೂರು ಪಂಚಾಯಿ ತಿಯಿಂದ ಪಡೆದು, ಅಲ್ಲಿಗೆ ತೆರಿಗೆ ಪಾವತಿ ಮಾಡುತ್ತಾರೆ.  ಆಯ್ಕೆಯಾದ ಸದಸ್ಯರು ಸಂತಕಸಲಗೆರೆ ಗ್ರಾ.ಪಂ.ನಲ್ಲಿ ಅನುದಾನ ಕೇಳಿದರೆ, ಆದಾಯ ಅಲ್ಲಿಗೆ ನೀಡುತ್ತೀರಿ. ಅನುದಾನ ಇಲ್ಲೇಕೆ ನೀಡಬೇಕು ಎಂಬ ಪ್ರಶ್ನೆ ಬರುವುದಿಲ್ಲವೇ ಎಂಬುದು ಇಲ್ಲಿನ ನಿವಾಸಿಗಳ ಪ್ರಶ್ನೆ.

ಹತ್ತು ವರ್ಷಗಳಿಂದ ಹೀಗೆಯೇ ಅಧಿಕಾರಿಗಳು ಮಾಡಿದ ಯಡವಟ್ಟಿ ನಿಂದ ಮಳವಳ್ಳಿ ತಾಲ್ಲೂಕಿನ ಶಾರದಯ್ಯನದೊಡ್ಡಿಯ ಗ್ರಾಮಸ್ಥರು ಡಿ. ಹಲಸಹಳ್ಳಿ ಪಂಚಾಯಿತಿಯಲ್ಲಿ ಮತ ದಾನ ಹೊಂದಿದ್ದಾರೆ. ಧನಗೂರು ಗ್ರಾಮ ಪಂಚಾಯಿತಿಗೆ ಕಂದಾಯ ಕಟ್ಟುತ್ತಾರೆ. ಮತದಾನ ಹಾಗೂ ಕಂದಾಯ ಕಟ್ಟುವುದನ್ನು ಒಂದೇ ಪಂಚಾಯಿತಿ ವ್ಯಾಪ್ತಿಗೆ ತರಬೇಕು ಎಂಬ ಕೂಗು ಇಂದಿಗೂ ಈಡೇರಿಲ್ಲ.

ಈ ಪ್ರದೇಶದ ಜನರು ಮಂಡ್ಯ ತಾಲ್ಲೂಕಿನಲ್ಲಿ ಬರುತ್ತಾರೆ. ಆದರೆ, ವಿವಿಧ ಯೋಜನೆಗಳಿಗೆ ಆಯ್ಕೆಯಾಗಬೇಕಾದರೆ ಶಾಸಕರನ್ನು ಭೇಟಿಯಾಗಲು ಶ್ರೀರಂಗ ಪಟ್ಟಣಕ್ಕೆ ಹೋಗಬೇಕು. ಈಗ ತೆರಿಗೆ ಪಾವತಿಸಲು ಬೇಲೂರು ಗ್ರಾಮ ಪಂಚಾ ಯಿತಿಗೆ ಹೋಗಬೇಕಾದರೆ, ವಾಸಸ್ಥಳ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆಯಲು ಸಂತಕಸಲಗೆರೆಗೆ ಹೋಗಬೇ ಕಾದ ಸ್ಥಿತಿ ಎದುರಿಸುತ್ತಿದ್ದಾರೆ.

ಕಚೇರಿಯಲ್ಲಿಯೇ ಕುಳಿತು ಕ್ಷೇತ್ರ ವಿಂಗಡಣೆ ಮಾಡಿದ ಪರಿಣಾಮ ಇದು. ಯಾವ ಪ್ರದೇಶ, ಯಾವ ಕಂದಾಯ ವ್ಯಾಪ್ತಿಯಲ್ಲಿದೆ ಎನ್ನುವುದನ್ನು ತಿಳಿದು ಕೊಳ್ಳದೇ ಮಾಡಿದ ಪ್ರಮಾದದ ಸಮಸ್ಯೆಯನ್ನು ನಾವು ಎದುರಿಸುವಂತಾ ಗಿದೆ ಎನ್ನುತ್ತಾರೆ ಕಾವೇರಿನಗರ 2ನೇ ಹಂತದ ನಿವಾಸಿ ಕೃಷ್ಣೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.