ADVERTISEMENT

ಕರಾವಳಿ ರಕ್ಷಣೆಗೆ ‘ಹೋವರ್‌ ಕ್ರಾಫ್ಟ್‌’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 19:30 IST
Last Updated 22 ಸೆಪ್ಟೆಂಬರ್ 2014, 19:30 IST

ಮಂಗಳೂರು: ಕರಾವಳಿ ರಕ್ಷಣಾ ಪಡೆಗೆ ‘ಹೋವರ್‌ ಕ್ರಾಫ್ಟ್‌  ಎಚ್‌–196’ ಏರ್‌ ಕುಷನ್‌ ವಾಹನವು (ಎಸಿವಿ) ಸೋಮವಾರ ಸೇರ್ಪಡೆಗೊಂಡಿದ್ದು, ಸಮುದ್ರದ ತೀರಪ್ರದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ.

ಹೋವರ್‌ ಕ್ರಾಫ್ಟ್‌  21 ಮೀಟರ್ ಉದ್ದವಿದ್ದು ನೀರಿನಲ್ಲಿ ಮತ್ತು ನೆಲದ ಮೇಲೆ ಸಂಚರಿಸಬಲ್ಲುದು. ನೀರಿನಲ್ಲಿ ತಾಸಿಗೆ 90 ಕಿ.ಮೀ. ವೇಗದಲ್ಲಿ ಸಂಚರಿಸ­ಬಲ್ಲ ಈ ವಾಹನದಲ್ಲಿ ಅತ್ಯಾಧುನಿಕ ಮಷಿನ್‌ ಗನ್‌ಗಳು, ರೇಡಾರ್‌, ಉಪಗ್ರಹ ಸಂಪರ್ಕದಂತಹ ಅತ್ಯಾಧುನಿಕ ಸಂಪರ್ಕ ಸಾಧನಗಳಿವೆ. ಕಮಾಂಡೆಂಟ್‌ ಗುಲ್‌ವಿಂದರ್‌ ಸಿಂಗ್‌ ಅವರು ಈ ಹೋವರ್‌ ಕ್ರಾಫ್ಟನ್ನು ಮುನ್ನಡೆಸಲಿದ್ದಾರೆ.  

‘ಹೋವರ್‌ ಕ್ರಾಫ್ಟ್‌ನ ತಾತ್ಕಾಲಿಕ ನಿಲುಗಡೆಗೆ ಪಣಂಬೂರು ಕಡಲ ತೀರದಲ್ಲಿ ವ್ಯವಸ್ಥೆ ಮಾಡ­ಲಾಗಿದೆ. ಕಾಯಂ ನಿಲುಗಡೆಗೆ ಶೀಘ್ರವೇ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಕರಾವಳಿಯ ಸಮುದ್ರ ತೀರದಲ್ಲಿ ಸರ್ವೇಕ್ಷಣೆ, ಅಪಾಯಕ್ಕೆ ಸಿಲುಕಿದ ದೋಣಿ­ಗಳ ರಕ್ಷಣಾ ಕಾರ್ಯ ಹಾಗೂ ಅರಬ್ಬಿ ಸಮುದ್ರದಲ್ಲಿ ಗಸ್ತು ತಿರುಗುವುದಕ್ಕೆ ಹೋವರ್‌ ಕ್ರಾಫ್ಟ್‌ ಅನ್ನು ಬಳಸಿಕೊಳ್ಳಲಾಗುವುದು’ ಎಂದು ಕರ್ನಾಟಕ ಕರಾವಳಿ ಕಾವಲು ಪಡೆಯ ಕಮಾಂಡೆಂಟ್‌ (ಜಿಲ್ಲಾ ಕಾರ್ಯಾ­ಚರಣೆ ಹಾಗೂ ಯೋಜನೆ) ರಾಜೇಂದ್ರ ಸಿಂಗ್‌ ಸಪಲ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.