ADVERTISEMENT

ಕಲ್ಲಡ್ಕದ ಇಬ್ಬರ ಗಡೀಪಾರಿಗೆ ಆದೇಶ

ಮತೀಯ ಗಲಭೆಗಳಿಗೆ ಕಾರಣರಾದ ಆರೋಪ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 20:26 IST
Last Updated 30 ಡಿಸೆಂಬರ್ 2017, 20:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಪದೇ ಪದೇ ಮತೀಯ ಗಲಭೆಗಳಿಗೆ ಕಾರಣರಾಗುತ್ತಿರುವ ಆರೋಪದ ಮೇಲೆ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಟ್ಟಣದ ನಿವಾಸಿಗಳಾದ ರತ್ನಾಕರ ಶೆಟ್ಟಿ ಮತ್ತು ಇಬ್ರಾಹಿಂ ಖಲೀಲ್‌ ಎಂಬುವವರನ್ನು ಆರು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ.

ರತ್ನಾಕರ ಶೆಟ್ಟಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ. ಇಬ್ರಾಹಿಂ ಖಲೀಲ್‌ ಕಲ್ಲಡ್ಕದಲ್ಲಿ ಒಂದು ಗುಂಪಿನ ನಾಯಕನಂತೆ ಗುರುತಿಸಿಕೊಂಡಿದ್ದ. ಇಬ್ಬರೂ ಬಂಟ್ವಾಳ ನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದರು. ಪೊಲೀಸ್‌ ಇಲಾಖೆಯ ಅರ್ಜಿ ಆಧರಿಸಿ ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌, ಇಬ್ಬರನ್ನೂ ಗಡೀಪಾರು ಮಾಡಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT