ADVERTISEMENT

ಕುಕ್ಕೆ: ಗೋ ನೈವೇದ್ಯದ ಮೇಲೆ ಎಡೆಸ್ನಾನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಎಡೆಸ್ನಾನ ನೆರವೇರಿಸಿದ ಭಕ್ತರು
ಎಡೆಸ್ನಾನ ನೆರವೇರಿಸಿದ ಭಕ್ತರು   

ಸುಬ್ರಹಣ್ಯ: ಕುಕ್ಕೆ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಚೌತಿಯ ದಿನವಾದ ಬುಧವಾರ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ 94 ಭಕ್ತರು ಎಡೆಸ್ನಾನ ಮಾಡಿ ಹರಕೆ ತೀರಿಸಿಕೊಂಡ‌ರು.

ದೇವಸ್ಥಾನದ ಗೋವುಗಳು ನೈವೇದ್ಯ ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸಿದರು.  ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ವೇದಮೂರ್ತಿ ಡಾ.ಎಚ್.ರಾಜ್‍ಗೋಪಾಲ್ ಮತ್ತು ಆಗಮ ಪಂಡಿತ ಪ್ರೊ.ಶಿವಕುಮಾರ್ ಮಾರ್ಗದರ್ಶನ ನೀಡಿದರು.

ಮಧ್ಯಾಹ್ನ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತಲೂ 432 ಬಾಳೆಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇದ್ಯ ಬಡಿಸಲಾಯಿತು. ಬಳಿಕ ದೇವಳದ ಗೋವುಗಳು ಆ ಎಲೆಗಳಲ್ಲಿದ್ದ ಅನ್ನಪ್ರಸಾದವನ್ನು ತಿಂದವು.  ದರ್ಪಣತೀರ್ಥ ನದಿಯಲ್ಲಿ ಮಿಂದು ನಿಂತಿದ್ದ ಎಲ್ಲ ಭಕ್ತರು ಹಸುಗಳು ತಿಂದ ಅನ್ನಪ್ರಸಾದದ ಮೇಲೆ ಉರುಳು ಸೇವೆ ನಡೆಸಿದರು.

ADVERTISEMENT

ಎಡೆಸ್ನಾನ ಸಂದರ್ಭ ಕ್ಷೇತ್ರದಲ್ಲಿ ಬಂದೋಬಸ್ತ್ ವಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.