ADVERTISEMENT

ಖೋಟಾ ನೋಟು, ಪ್ರಿಂಟರ್ ಪತ್ತೆ ಪ್ರಕರಣ: ಉಪನ್ಯಾಸಕ ಶಿವಕುಮಾರ ಕುಕನೂರು ಬಿಡುಗಡೆ

ಕನ್ನಡಪರ ಸಂಘಟನೆಗೆ ಸೇರಿದ ನಾಲ್ವರು ಆರೋಪಿಗಳು ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 5:34 IST
Last Updated 23 ಜುಲೈ 2017, 5:34 IST
ಖೋಟಾ ನೋಟು, ಪ್ರಿಂಟರ್ ಪತ್ತೆ ಪ್ರಕರಣ: ಉಪನ್ಯಾಸಕ ಶಿವಕುಮಾರ ಕುಕನೂರು ಬಿಡುಗಡೆ
ಖೋಟಾ ನೋಟು, ಪ್ರಿಂಟರ್ ಪತ್ತೆ ಪ್ರಕರಣ: ಉಪನ್ಯಾಸಕ ಶಿವಕುಮಾರ ಕುಕನೂರು ಬಿಡುಗಡೆ   

ಕೊಪ್ಪಳ: ಖೋಟಾ ನೋಟು ಮತ್ತು ಪ್ರಿಂಟರ್ ಹೊಂದಿದ್ದ ಪ್ರಕರಣದ ಆರೋಪಿ, ಉಪನ್ಯಾಸಕ ಶಿವಕುಮಾರ ಕುಕನೂರು ಅವರನ್ನು ಭಾನುವಾರ ಬೆಳಗಿನ ಜಾವ 4ಕ್ಕೆ ನಗರ ಠಾಣೆ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಪ್ರಕರಣದಲ್ಲಿ ಶಿವಕುಮಾರ್ ಅವರನ್ನು ಸಿಲುಕಿಸಲು ಯತ್ನಿಸಿದ  ಕನ್ನಡಪರ ಸಂಘಟನೆಯೊಂದಕ್ಕೆ ಸೇರಿದ ನಾಲ್ವರು ಆರೋಪಿಗಳನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ವಿವರ ಇನ್ನಷ್ಟೇ ತಿಳಿಯಬೇಕಿದೆ.

ಶುಕ್ರವಾರ ರಾತ್ರಿ ಶಿವಕುಮಾರ್ ಮನೆಗೆ ಭೇಟಿ ನೀಡಿ ಪಾರ್ಸೆಲ್ ರೂಪದ ಬಾಕ್ಸ್‌ನಲ್ಲಿ ಕಲರ್ ಪ್ರಿಂಟರ್ ಮತ್ತು ಖೋಟಾ ನೋಟು ಪತ್ತೆ ಮಾಡಿದ್ದರು. ಅದರ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಶಿವಕುಮಾರ್ ಪೊಲೀಸರಿಗೆ ಹೇಳಿದ್ದರು.

ADVERTISEMENT

ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಪ್ರಾಮಾಣಿಕ ತನಿಖೆ ನಡೆಯಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದರು.

[ಇನ್ನಷ್ಟು ಓದು]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.