ADVERTISEMENT

ದೇವೇಗೌಡರ ಕಾಲಿಗೆರೆಗಿದ ಚನ್ನರಾಯಪಟ್ಟಣ ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2017, 20:17 IST
Last Updated 9 ಏಪ್ರಿಲ್ 2017, 20:17 IST
ದೇವೇಗೌಡರ ಕಾಲಿಗೆರೆಗಿದ ಚನ್ನರಾಯಪಟ್ಟಣ ತಹಶೀಲ್ದಾರ್‌
ದೇವೇಗೌಡರ ಕಾಲಿಗೆರೆಗಿದ ಚನ್ನರಾಯಪಟ್ಟಣ ತಹಶೀಲ್ದಾರ್‌   

ಶ್ರವಣಬೆಳಗೊಳ (ಹಾಸನ ಜಿಲ್ಲೆ): ಹೋಬಳಿಯ ಹಡೇನಹಳ್ಳಿ ಶನಿವಾರ ಗುಡ್‌ ಸಿಟಿಜನ್‌ ಶಾಲೆಯ ನೂತನ ಕಟ್ಟಡ ಮತ್ತು ಈಜುಕೊಳದ ಉದ್ಘಾಟನೆ ಬಂದಿದ್ದ ಸಂಸದ ಎಚ್.ಡಿ.ದೇವೇಗೌಡ ಅವರ ಕಾಲಿಗೆ ಚನ್ನರಾಯಪಟ್ಟಣ ತಹಶೀಲ್ದಾರ್ ಡಿ.ವಿದ್ಯಾವತಿ ನಮಸ್ಕರಿಸುವ ಮೂಲಕ ಅಚ್ಚರಿ ಮೂಡಿಸಿದರು.

ವಿದ್ಯಾವತಿ ಅವರು ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಎಲ್ಲರಿಗಿಂತ ಮುಂಚಿತವಾಗಿಯೇ ಬಂದಿದ್ದರು. ಕರ್ತವ್ಯಲೋಪ ಆರೋಪದ ಮೇಲೆ ಜಿಲ್ಲಾಧಿಕಾರಿ ವಿ.ಚೈತ್ರಾ ಅವರು ಏ. 5ರಿಂದ ರಜೆ ಮೇಲೆ ತೆರಳುವಂತೆ ಆದೇಶ ನೀಡಿದ್ದರೂ ಆದೇಶಕ್ಕೆ ಸೆಡ್ಡು ಹೊಡೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇತ್ತೀಚೆಗೆ ಹಾಸನದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ನಡೆಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ನೀಡಿರುವ ನೋಟಿಸ್ ಸಂಬಂಧ ವಿದ್ಯಾವತಿ ಕಣ್ಣೀರಿಟ್ಟಿದ್ದರು.

ADVERTISEMENT

‘ನಾನು ಕರ್ತವ್ಯ ನಿರ್ವಹಿಸಿದರೂ ವಿನಾಕಾರಣ ಕಡ್ಡಾಯ ರಜೆ ಮೇಲೆ ತೆರಳುವ ಆದೇಶ ನೀಡಿದ್ದಾರೆ’ ಎಂದು ಕಣ್ಣೀರಿಟ್ಟಿದ್ದರು. ಈ ಸಂದರ್ಭದಲ್ಲಿ ಶಾಸಕ ಎಚ್‌.ಡಿ.ರೇವಣ್ಣ ಅವರು ತಹಶೀಲ್ದಾರ್ ವಿದ್ಯಾವತಿ ಪರ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.