ADVERTISEMENT

ನಾಯಿಮರಿ ನುಂಗಲು ಯತ್ನಿಸಿದ ನಾಗರಹಾವು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 8:01 IST
Last Updated 28 ಮಾರ್ಚ್ 2017, 8:01 IST
ನಾಯಿಮರಿ ನುಂಗಲು ಯತ್ನಿಸಿದ ನಾಗರಹಾವು
ನಾಯಿಮರಿ ನುಂಗಲು ಯತ್ನಿಸಿದ ನಾಗರಹಾವು   

ಶಿರಸಿ: ನಾಯಿಮರಿ ನುಂಗಲು ಯತ್ನಿಸಿದ ನಾಗರಹಾವಿನ ವಿಡಿಯೊ ವಾಟ್ಸ್ಆ್ಯಪ್‌ಗಳಲ್ಲಿ  ವೈರಲ್ ಆಗಿ ಹರಿದಾಡುತ್ತಿದೆ.

ಇಲ್ಲಿನ ಬನವಾಸಿ ರಸ್ತೆಯ ಶನೇಶ್ವರ ದೇವಾಲಯದ ಪಕ್ಕದಲ್ಲಿರುವ ಕಿರಣ್ ಫರ್ನಾಂಡೀಸ್ ಎಂಬರ ಮನೆಯ ಪಕ್ಕದಲ್ಲಿ ನಾಗರಹಾವು ನಾಯಿ ಮರಿಯನ್ನು ನುಂಗಲು ಯತ್ನಸಿದೆ.

ಫರ್ನಾಂಡೀಸ್ ಅವರು ಸಾಕಿದ ನಾಯಿ  ಆರು ಮರಿಗಳನ್ನು ಹಾಕಿತ್ತು. ದೊಡ್ಡದಾಗಿದ್ದ ಮರಿಗಳು ಅತ್ತಿತ್ತ ಓಡಾಡಿಕೊಂಡು ಇರುತ್ತಿದ್ದವು. ಈ ಮರಿಗಳನ್ನು ನೋಡಿರುವ ನಾಗರಹಾವೊಂದು ಸೋಮವಾರ ಸಂಜೆ ಮನೆಯ ಸಮೀಪ ಬಂದಿದೆ.

ADVERTISEMENT

ಮೂರು ನಾಯಿಮರಿಗಳನ್ನು ಕಚ್ಚಿ ಕೊಂದು ಹಾಕಿ ಒಂದು ಮರಿಯನ್ನು ನುಂಗಲು ಯತ್ನಿಸಿದೆ.  ನಾಯಿ ಮರಿಯನ್ನು ಅರ್ಧ ನುಂಗಿ ಹಾವು ಚಡಪಡಿಸುತ್ತಿತ್ತು. ಮೂರು ಗಂಟೆಗಳ ಕಾಲ ನಾಯಿ ಮರಿಯನ್ನು ನುಂಗಲು ಯತ್ನಿಸಿತು. ಅದು ಸಾಧ್ಯವಾಗದಿದ್ದಾಗ ನಾಯಿ ಮರಿಯನ್ನು ಹೊರ ಹಾಕಿತು. 

ಈ ವೇಳೆಗೆ ಸ್ಥಳಕ್ಕೆ ಆಗಮಿಸಿದ ಉರಗ ಉರಗ ತಜ್ಞ ಪ್ರಶಾಂತ ಹುಲೇಕಲ್ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.