ADVERTISEMENT

ಪಂಪ್‌ಸೆಟ್‌ಗೆ ಮೀಟರ್ ಇನ್ನೂ ತೀರ್ಮಾನ ಇಲ್ಲ

ರೈತರ ಸಭೆಯಲ್ಲಿ ಮುಖ್ಯಮಂತ್ರಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 19:30 IST
Last Updated 28 ಮಾರ್ಚ್ 2015, 19:30 IST
ಪಂಪ್‌ಸೆಟ್‌ಗೆ ಮೀಟರ್ ಇನ್ನೂ ತೀರ್ಮಾನ ಇಲ್ಲ
ಪಂಪ್‌ಸೆಟ್‌ಗೆ ಮೀಟರ್ ಇನ್ನೂ ತೀರ್ಮಾನ ಇಲ್ಲ   

ಬೆಂಗಳೂರು: ನೀರಾವರಿ ಪಂಪ್‌ಸೆಟ್‌ ಗಳಿಗೆ ಮೀಟರ್‌ ಅಳವಡಿಸುವ ವಿಚಾರದಲ್ಲಿ ಸರ್ಕಾರ ರೈತರ ಹಿತಾಸಕ್ತಿಗೆ ವಿರುದ್ಧವಾದ ತೀರ್ಮಾನ ತೆಗೆದುಕೊಳ್ಳು ವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಲ್ಲಿ ರೈತ ಮುಖಂಡರಿಗೆ ಭರವಸೆ ನೀಡಿದರು.

ಇಂಧನ ಇಲಾಖೆ ಆಯೋಜಿಸಿದ್ದ ‘ರೈತರನ್ನು ರಕ್ಷಿಸಿ, ವಿದ್ಯುತ್ ಉಳಿಸಿ’ ಸಂವಾದ ಉದ್ಘಾಟಿಸಿ ಅವರು ಮಾತ ನಾಡುವ ವೇಳೆ, ‘ಮೀಟರ್‌ ಅಳವಡಿ ಸುವುದು ಬೇಡವೇ ಬೇಡ’ ಎಂದು ರೈತರು ಒಕ್ಕೊರಲಿನಿಂದ ಒತ್ತಾಯಿಸಿ ದರು. ಇದಕ್ಕೆ ಸಮ್ಮತಿಸಿದ ಸಿದ್ದ ರಾಮಯ್ಯ, ‘ಅಂಥದ್ದೇನೂ ಇಲ್ಲ, ಬಿಡಿ. ಮೀಟರ್ ಅಳವಡಿಸುವ ನಿರ್ಧಾರ ವನ್ನು ಸರ್ಕಾರ ಕೈಗೊಂಡಿಲ್ಲ’ ಎಂದು ಅವರು ಹೇಳಿದರು.

ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ರೈತರು ವಿರೋಧ ಮಾಡ ಬಾರದು. ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲು ಈ ಬಾರಿ  7,500 ಕೋಟಿ ಮೀಸಲಿಡಲಾಗಿದೆ. ಇದು ಸರ್ಕಾರಕ್ಕೆ ಹೊರೆ ಎಂದು ಸಿದ್ದರಾಮಯ್ಯ ಹೇಳಿದರು.
ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಆಧಾರದಲ್ಲಿ ಇಲಾಖೆ ಏನು ಮಾಡಬಹುದು ಎಂಬುದನ್ನು ಚರ್ಚಿಸಲಾಗುವುದು. ಎಲ್ಲ ಜಿಲ್ಲೆಗಳಿಂದ ತಲಾ ಒಬ್ಬ ರೈತ ಮುಖಂಡರನ್ನು ಆಹ್ವಾನಿಸಿ, ಮತ್ತೊಮ್ಮೆ ಸಭೆ ನಡೆಸ ಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪ್ರಕಟಿಸಿದರು.

ರೈತರ ಮೊಬೈಲ್‌ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಂಡು, ವಿದ್ಯುತ್‌ ಯಾವಾಗ ದೊರೆಯುತ್ತದೆ, ಯಾವಾಗ ಕಡಿತ ಮಾಡಲಾಗುತ್ತದೆ ಎಂಬ ವಿವರವನ್ನು ಅವರಿಗೆ ಎಸ್‌ಎಂಎಸ್‌ ಮೂಲಕ ತಿಳಿಸುವ ವ್ಯವಸ್ಥೆ ರೂಪಿಸುವ ಯೋಚನೆ ಇದೆ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.