ADVERTISEMENT

ಪರಿಸರ ಪ್ರಶಸ್ತಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2015, 19:30 IST
Last Updated 24 ಏಪ್ರಿಲ್ 2015, 19:30 IST

ಬೆಂಗಳೂರು:  ಪರಿಸರ ಇಲಾಖೆಯು ನೀಡುವ ರಾಜ್ಯ ಪರಿಸರ ಪ್ರಶಸ್ತಿಗಳಿಗಾಗಿ ವ್ಯಕ್ತಿ ಮತ್ತು ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
2014–15ನೇ ಸಾಲಿನ ಪ್ರಶಸ್ತಿ ಇದಾಗಿದ್ದು, ಪರಿಸರ ಸಂರಕ್ಷಣೆಗಾಗಿ ಸೇವೆ ಸಲ್ಲಿಸಿರುವ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಇಲಾಖೆಯು ಪ್ರಶಸ್ತಿಗಳನ್ನು ನೀಡಲಿದೆ.

ರಾಜ್ಯದ ಮೂರು ವಲಯಗಳ (ಮಲೆನಾಡು ಕರಾವಳಿ, ದಕ್ಷಿಣ ವಲಯ ಮತ್ತು ಉತ್ತರ ವಲಯ) ತಲಾ ಒಬ್ಬರಿಗೆ ಮತ್ತು ಒಂದು ಸಂಸ್ಥೆಯನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಿದೆ.

ಪ್ರಶಸ್ತಿಗಳು ತಲಾ ಒಂದು ಲಕ್ಷ ನಗದು ಮತ್ತು ಪ್ರಶಸ್ತಿ ಪತವನ್ನು ಒಳಗೊಂಡಿವೆ. ಅರ್ಜಿ ಸಲ್ಲಿಕೆಗೆ ಮೇ 12ರಂದು ಕೊನೆಯ ದಿನ.

ವಿಳಾಸ: ಕಾರ್ಯದರ್ಶಿ, ಪರಿಸರ ಇಲಾಖೆ, ಕೊಠಡಿ ಸಂಖ್ಯೆ 708, 7ನೇ ಮಹಡಿ, ಬಹುಮಹಡಿಗಳ ಕಟ್ಟಡ, 4ನೇ ಹಂತ, ಬೆಂಗಳೂರು–560001.
ವೆಬ್‌ಸೈಟ್‌ ವಿಳಾಸ: www.parisara.kar.nic.in.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.