ADVERTISEMENT

ಪುಸ್ತಕ ಮಾರಿ ರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2015, 19:40 IST
Last Updated 1 ನವೆಂಬರ್ 2015, 19:40 IST

ಕಡೂರು: ‘ನಾನು ಶಾಸಕ ದತ್ತ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಪುಸ್ತಕ ಮಾರುತ್ತಿದ್ದೇನೆ. ದಯಮಾಡಿ ಒಂದು ಪುಸ್ತಕ ಕೊಂಡುಕೊಳ್ಳಿ’
– ಕಡೂರು ಶಾಸಕ ವೈ.ಎಸ್‌.ವಿ. ದತ್ತ  ಅವರು ಕನ್ನಡ ರಾಜ್ಯೋತ್ಸವ  ಆಚರಿಸಿದ ಪರಿ ಇದು. ಬಗಲಿಗೆ ಬ್ಯಾಗ್ ಹಾಕಿಕೊಂಡು, ಕೈಲಿ ಪುಸ್ತಕ ಹಿಡಿದು ‘ರಾಜ್ಯೋತ್ಸವದ ಈ ದಿನದಂದು ಒಂದಾದರೂ ಕನ್ನಡ ಪುಸ್ತಕ ಕೊಂಡುಕೊಳ್ಳಿ’  ಎಂದು ಹೇಳಿ ಮಾರಾಟ ಮಾಡುತ್ತಿದ್ದ ದೃಶ್ಯ ಕಡೂರಿನ ಜನತೆಗೆ ಅಚ್ಚರಿ ತಂದಿತು.

ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಅಂದು ಕನ್ನಡಿಗರು ಕನಿಷ್ಠ ಒಂದಾದರೂ ಕನ್ನಡ ಪುಸ್ತಕ ಕೊಂಡು ಓದಬೇಕು ಎಂಬ ಆಶಯದಿಂದ ಶಾಸಕ ದತ್ತ ಅವರು ಸ್ವತಃ ₹ 25 ಸಾವಿರದ ಕನ್ನಡ ಪುಸ್ತಕಗಳನ್ನು ತಂದು ತಾವೇ ಸ್ವತಃ ಇತರೆ ಅಧಿಕಾರಿ ವರ್ಗದವರೊಂದಿಗೆ ಕಡೂರಿನ ರಸ್ತೆಗಳಲ್ಲಿ ಸುತ್ತಿ ಪುಸ್ತಕ ಮಾರಾಟ ಮಾಡಿ ಕನ್ನಡದ ಅಭಿಮಾನ ಮೆರೆದರು.

ವಿಶ್ವನಾಥ್ ವೃತ್ತದ ಬಳಿ ಸರ್ಕಾರಿ ಬಸ್ ಒಂದನ್ನು ತಡೆದ ದತ್ತ ಬಸ್ ಒಳಗೆ ಹೋಗಿ ‘ನಾನು ಶಾಸಕ ದತ್ತ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಪುಸ್ತಕ ಮಾರುತ್ತಿದ್ದೇನೆ. ದಯಮಾಡಿ ಒಂದು ಪುಸ್ತಕ ಕೊಂಡುಕೊಳ್ಳಿ’ ಎಂದು ವಿನಮ್ರವಾಗಿ ಕೋರಿದಾಗ ಪ್ರಯಾಣಿಕರು ಅಚ್ಚರಿಯೊಂದಿಗೆ ದತ್ತ ಅವರ ಬಳಿ ಮುಗಿಬಿದ್ದು ಪುಸ್ತಕ ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.